ಮಂಗಳೂರಿನಲ್ಲಿ ಮಂಗಳಮುಖಿಯರಿಂದ ಪ್ರಥಮ ಬಾರಿ ಮತದಾನ

Spread the love

ಮಂಗಳೂರಿನಲ್ಲಿ ಮಂಗಳಮುಖಿಯರಿಂದ ಪ್ರಥಮ ಬಾರಿ ಮತದಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 100 ಮಂಗಳಮುಖಿಯರು ಮತದಾನಕ್ಕೆ ಅವಕಾಶ ಪಡೆದಿದ್ದು, ಆ ಪೈಕಿ ಸುಮಾರು 30 ಮಂದಿ ಬೆಳಗ್ಗೆ ನಗರದ ಮಿಲಾಗ್ರಿಸ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಲು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ ಮಂಗಳಮುಖಿಯರು ಸಾಲಿನಲ್ಲೇ ನಿಂತು ಮತ ಚಲಾಯಿಸಿದರು.

ಈ ಸಂದರ್ಭ ಮಂಗಳಮುಖಿ ಸಂಜನಾ ಎಂಬವರು ಸುದ್ದಿಗಾರರೊಂದಿಗೆ ಮಾತನಾಡಿ ‘ನಾವು ಮತದಾನ ಮಾಡಲು ಬೇಡಿಕೆ ಸಲ್ಲಿಸುತ್ತಲೇ ಇದ್ದೆವು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಒಂದು ಅವಕಾಶ ಸಿಕ್ಕಿದೆ. ಹಾಗಾಗಿ ನಮಗೆ ಇಂದು ಸ್ವಾತಂತ್ರ ಸಿಕ್ಕಿದೆ ಎನ್ನಬಹುದು. ಈ ಸಂತಸದ ಕ್ಷಣವನ್ನು ನಾವು ಎಂದೂ ಕೂಡಾ ಮರೆಯಲು ಸಾಧ್ಯವಿಲ್ಲ’ಈ ಒಂದು ಅವಕಾಶ ಲಭಿಸಬೇಕಾದರೆ ಇದಕ್ಕೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಪ್ರಮುಖ ಕಾರಣ ಎಂದರು.

ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂಗಳಮುಖಿಯರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.


Spread the love