ಮಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Spread the love

ಮಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸೆಯ ಆತಂಕಕಾರಿ ಘಟನೆಗಳ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಮಂಗಳೂರಿನ ಪ್ರಮುಖ ಸಂಘಟನೆಗಳ ಒಕ್ಕೂಟವು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಐಕ್ಯ ಪ್ರತಿಭಟನೆಯನ್ನು  ಶುಕ್ರವಾರ, ಆಗಸ್ಟ್ 23, 2024 ರಂದು ಮಧ್ಯಾಹ್ನ 3:30 ಗಂಟೆಗೆ ಮಂಗಳೂರಿನ ಟೌನ್ ಹಾಲ್ ಬಳಿ ಆಯೋಜಿಸಿದೆ.

ಈ ಮಹತ್ವದ ಕಾರ್ಯಕ್ರಮವನ್ನು ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಮತ್ತು ಸಾಮಾಜಿಕ ನ್ಯಾಯ ಆಯೋಗಗಳು ಮತ್ತು ಯುವ ಮತ್ತು ಸಾಮಾಜಿಕ ಸಂವಹನ ಆಯೋಗಗಳು, ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ (AKUCFHR), ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಮದರ್ ಥೆರೆಸಾ ವಿಚಾರ ವೇದಿಕೆ, ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಮತ್ತು ಕಾನ್ಫರೆನ್ಸ್ ಆಫ್ ರಿಲಿಜಿಯಸ್ ಇಂಡಿಯಾ (CRI) ಮಂಗಳೂರು ಘಟಕ ಜಂಟಿಯಾಗಿ ಆಯೋಜಿಸಿವೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನೊಳಗೊಂಡ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಇಂತಹ ಘಟನೆಗಳಲ್ಲಿ ಕೆಲವು ದಿನನಿತ್ಯದ ಮುಖ್ಯಾಂಶಗಳಾದರೆ , ಇತರ ಘಟನೆಗಳು ಗಮನಕ್ಕೆ ಬಾರದೆ ಸಾರ್ವಜನಿಕ ವಲಯದಲ್ಲಿ ಮಾತನಾಡದೆ ಉಳಿದಿದೆ ಅಥವಾ ಉದ್ದೇಶಪೂರ್ವಕವಾಗಿ ಅವುಗಳನ್ನು ಮೌನಗೊಳಿಸಲಾಗುತ್ತದೆ. ಈ ಪ್ರತಿಭಟನೆಯು ಅಂತಹ ಎಲ್ಲಾ ಘಟನೆಗಳ ಬಗ್ಗೆ ಗಮನ ಸೆಳೆಯುವ ಮತ್ತು ಮಹಿಳೆಯರನ್ನು ರಕ್ಷಿಸಲು ಮತ್ತು ಸಮಾಜದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಲವಾದ ಕ್ರಮಗಳನ್ನು ಒತ್ತಾಯಿಸುವ ಗುರಿಯನ್ನು ಹೊಂದಿರುತ್ತದೆ. ಈ ಪ್ರತಿಭಟನೆಯು ಸಾಮೂಹಿಕ ಕಳವಳಗಳನ್ನು ವ್ಯಕ್ತಪಡಿಸಲು ಮತ್ತು ಈ ಹೇಯ ಕೃತ್ಯಗಳ ಅಪರಾಧಿಗಳ ವಿರುದ್ಧ ತಕ್ಷಣದ ಕ್ರಮಕ್ಕಾಗಿ ಆಗ್ರಹಿಸಲು ವೇದಿಕೆಯಾಗಿದೆ.

“ಸುರಕ್ಷತೆಗಾಗಿ ಹಕ್ಕೊತ್ತಾಯ” ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಸಾಮಾಜಿಕ ಮುಖಂಡರು ಸೇರಿದಂತೆ ಎಲ್ಲಾ ಸಮುದಾಯದ ಸದಸ್ಯರಿಗೆ  ಮಹಿಳೆಯರ ಜೀವ ಮತ್ತು ಘನತೆಗೆ ಧಕ್ಕೆ ತರುವ ದೌರ್ಜನ್ಯವನ್ನು ಕೊನೆಗೊಳಿಸಲು “ನ್ಯಾಯಾಕ್ಕಾಗಿ ಒಂದಾಗಿ ನಿಲ್ಲೋಣ” ಎಂಬ ಕರೆ ನೀಡಲಾಗಿದೆ.

ಮಹಿಳಾ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಾಮೂಹಿಕ ನ್ಯಾಯ ಬೇಡಿಕೆಗೆ ಒತ್ತು ನೀಡುವ ಈ ಪ್ರತಿಭಟನೆಯಲ್ಲಿ ನಮ್ಮೊಂದಿಗೆ ಸೇರಿ ಒಗ್ಗಟ್ಟಾಗಿ ನಿಲ್ಲುವಂತೆ ಮಾಧ್ಯಮ ಮಿತ್ರರಿಗೆ, ಸಮುದಾಯದ ಮುಖಂಡರಿಗೆ ಮತ್ತು ಸಾರ್ವಜನಿಕರಿಗೆ ಪ್ರೀತಿಯ ಆಹ್ವಾನ.

ವಿವರಗಳು:

ದಿನಾಂಕ: ಶುಕ್ರವಾರ, ಆಗಸ್ಟ್ 23, 2024
ಸಮಯ: ಮಧ್ಯಾಹ್ನ 3:30
ಸ್ಥಳ: ಟೌನ್ ಹಾಲ್ ಹತ್ತಿರ, ಮಂಗಳೂರು

ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: ಶ್ರೀಮತಿ ಅನಿತಾ ಫ್ರಾಂಕ್ 9986342712, ಫಾದರ್ ವಿನೋದ್ ಮಸ್ಕರೇನ್ಹಸ್ 8197679453


Spread the love