ಮಂಗಳೂರಿನಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಸಂಚಾರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಮಂಗಳೂರು: ಮೊಬೈಲ್ ಫೀವರ್ ಕ್ಲಿನಿಕ್ ಮಂಗಳೂರು ನಗರದಲ್ಲಿ ಪ್ರಾರಂಭವಾಗಿದ್ದು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಉದ್ಘಾಟಿಸಿದರು.
ಇಲ್ಲಿಗೆ ಸಾರ್ವಜನಿಕರು ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಇನ್ನೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಲು ಸಂಚಾರಿ ಫೀವರ್ ಕ್ಲಿನಿಕ್ ಚಾಲನೆಗೆ ತರಲಾಗಿದೆ. ಇಂದಿನಿಂದ ಬಸ್ ನಗರಾದ್ಯಂತ ಸಂಚರಿಸಲಿದೆ ಎಂದು ತಿಳಿಸಿದರು.ಈ ಬಸ್ನಲ್ಲಿ ವೈದ್ಯಾಧಿಕಾರಿಗಳು, ನರ್ಸ್ಗಳಿಗೆ ಪ್ರತ್ಯೇಕವಾಗಿ ಟೇಬಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ರೋಗಿಗಳು ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಕೆಲವು ಔಷಧಿಗಳನ್ನು ಇಡಲು ಬಾಕ್ಸ್ಗಳನ್ನು ಇಡಲಾಗಿದೆ. ಜತೆಗೆ ಸಾಬೂನು ಆಯಿಲ್, ಸ್ಯಾನಿಟೈಸರ್, ಮಾಸ್ಕ್ಗಳನ್ನು ಇಡಲಾಗಿದೆ. ಕೈ ತೊಳೆಯಲು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಬಹಳ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದರು.
ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.