ಮಂಗಳೂರಿನ ಅಡ್ಯಾರ್ ಪದವಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆ
ಮಂಗಳೂರಿನಲ್ಲಿ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು.ಈ ಕಾರ್ಯಕ್ರಮವು ದೀಪಪ್ರಜ್ವಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಸಾಧಕಿಯಾದ ಲಕ್ಷ್ಮೀ ಪೈ ಇವರು ಮಾಡಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಇವರು ಹಾಗೂ ಸನಾತನ ಸಂಸ್ಥೆಯ ಸೌ. ಮಂಜುಳಾ ರಮಾನಂದಗೌಡ ಇವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಶಂಖನಾದ ಹಾಗೆಯೇ ವೇದಮಂತ್ರ ಪಠಣೆಯಿಂದ ಆರಂಭವಾಯಿತು. ದ.ಕ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಪ್ರಭಾಕರ ಪಡಿಯಾರ್ ಇವರು ಕಾರ್ಯದ ಬಗ್ಗೆ ವಿವರಿಸಿದದರು.
ಮಂಗಳೂರಿನ ಉದ್ಯಮಿಯಾದ ದಿನೇಶ್ ವಿವರಿಸುತ್ತ ಮನುಷ್ಯ ಜನ್ಮದ ಉದ್ದೇಶವನ್ನು ನೆರೆದವರಿಗೆ ತಿಳಿಸಿದರು.ಧರ್ಮಪ್ರಸಾರದಲ್ಲಿ ತಮ್ಮ ಸಹಭಾಗದ ಬಗ್ಗೆ, ಅನುಭವವನ್ನು ಹಂಚಿಕೊಂಡರು.ದೇವತೆಗಳ ವಿಡಂಬಣೆ ತಡೆಯುವುದು ನಮ್ಮ ಕರ್ತವ್ಯ ಎಂದು ಹೇಳಿದರು.ಇತ್ತೀಚಿಗೆ ಅವರ ವಾಟ್ಸಆಪ್‍ನಲ್ಲಿ ಶಿವನ ತ್ರಿಶೂಲವನ್ನು ಮ್ಯಾಗಿ ತಿನ್ನಲು ಮಗ ತೆಗೆದುಕೊಂಡು ಹೋಗಿದ್ದಾನೆ ಎಂದು ಪಾರ್ವತಿ ದೇವಿಯು ಹೇಳುವಂತಾಹ ಕಿರುಸಂದೇಶಕ್ಕೆ ಕ್ಷಾತ್ರವೃತ್ತಿಯಿಂದ ವಿರೋದ ವ್ಯಕ್ತ ಪಡಿಸಿದರು.
ಲಕ್ಷ್ಮೀ ಪೈ ವಿವರಿಸಿಕಾಲಾನುಸಾರ ಸ್ತ್ರೀಯರಿಗೆ ಸ್ವಸಂರಕ್ಷಣೆ ಅವಶ್ಯಕತೆ ಬಗ್ಗೆ ವಿವರಿಸುತ್ತಾ ಕನ್ಯಾ ಶೌರ್ಯ ಅಭಿಯಾನ,ಯುವ ಶೌರ್ಯ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿ ಕರೆ ಕೊಟ್ಟರು.ಪ್ರತಿಯೊಬ್ಬರು ಧರ್ಮಾಚರಣೆ ಮಾಡಬೇಕು ಎಂದು ಹೇಳಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಅಬಕ್ಕರಾಣಿ ಇವರೆಲ್ಲರೂ ಸ್ತ್ರೀಯರಾಗಿ ದೇಶಕ್ಕಾಗಿ ಹೋರಾಡಿದ ವೀರಾಂಗನೆಯವರು ಎಂದು ಉದ್ಗರಿಸಿದರು.
ಕಾಲಾನುಸಾರ ಸ್ತ್ರೀಯರಿಗೆ ಸ್ವಸಂರಕ್ಷಣೆ ಅವಶ್ಯಕತೆ ಬಗ್ಗೆ ವಿವರಿಸುತ್ತಾ ಕನ್ಯಾ ಶೌರ್ಯ ಅಭಿಯಾನ,ಯುವ ಶೌರ್ಯ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿ ಕರೆ ಕೊಟ್ಟರು.ಪ್ರತಿಯೊಬ್ಬರು ಧರ್ಮಾಚರಣೆ ಮಾಡಬೇಕು ಎಂದು ಹೇಳಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಅಬಕ್ಕರಾಣಿ ಇವರೆಲ್ಲರೂ ಸ್ತ್ರೀಯರಾಗಿ ದೇಶಕ್ಕಾಗಿ ಹೋರಾಡಿದ ವೀರಾಂಗನೆಯವರು ಎಂದು ಉದ್ಗರಿಸಿದರು.
ಸನಾತನ ಸಂಸ್ಥೆ ಸೌ. ಮಂಜುಳಾ ರಮಾನಂದಗೌಡ ಇವರು ಸಂಸ್ಥೆಯ ರಾಷ್ಟ್ರವ್ಯಾಪಿ ಕಾರ್ಯದ ಬಗ್ಗೆ ವಿವರಿಸಿದರು.ಸುಖದ ಮೂಲ ಧರ್ಮಾಚರಣೆಯಲ್ಲಿದೆ.ನಾವು ಮಾಡುವ ಪ್ರತಿಯೊಂದು ಕೃತಿಯು ಭಗವಂತನ ಶಕ್ತಿಯನ್ನು ಆಕರ್ಷಿಸುತ್ತದೆ ಹಾಗೆಯೇ ಈಶ್ವರನತ್ರ ಹೋಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸನಾತನ ಸಂಸ್ಥೆಯ ಸಾಧಕರ ಮೇಲೆ ಎಷ್ಟು ಹಲ್ಲೆ,ಸಂಸ್ಥೆಯ ಮೇಲೆ ಆರೋಪ ಹಾಕಿದರು ” ಸತ್ಯ ಮೇವ ಜಯತೇ” ಎಂಬಂತೆ ಹೋರಾಟ ಮಾಡಿದೆ.ಸನಾತನ ಸಂಸ್ಥೆಯು 25 ವರ್ಷಗಳಿಂದ ಧರ್ಮಪ್ರಸಾರ ಮತ್ತು ಧರ್ಮದ ಏಳಿಗೆಗಾಗಿ ಹಗಲು ರಾತ್ರಿ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.ಧರ್ಮದ ಹೋರಾಟದಲ್ಲಿ ದುರ್ಜನರು ಎಷ್ಟೇ ಬಲಶಾಲಿಗಳು ಇದ್ದರು ಪರಮೇಶ್ವರನು ಅವರಿಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ ಆದರಿಂದ ಅವನ ಅಶೀರ್ವಾದದ ಬಲದಲ್ಲಿ ನಾವು ಹೋರಾಡಬಹುದು ಅದಕ್ಕಾಗಿ ಸಾಧನೆಯನ್ನು ಪ್ರಾರಂಭಿಸಿ ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರಾದ ಗುರುಪ್ರಸಾದ್ ಇವರು ಹಿಂದೂಗಳು ಒಟ್ಟಾಗೋಣ ಎಂದು ಕರೆ ನೀಡುತ್ತಾ,ವಿಶ್ವದಲ್ಲಿ ಭಾರತವನ್ನು ಮಾತ್ರ ಮಾತೆ ಎಂದು ಹೇಳುತ್ತಾರೆ ಆದರೆ ಭಾರತದಲ್ಲಿ ಒಂದೇಒಂದೋ ಹಿಂದೂ ರಾಷ್ಟ್ರ ಇಲ್ಲ.ಎಲ್ಲಾ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರವು ತುಂಬಿದೆ ಎಂದು ಹೇಳುತ್ತಾ ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದ ಹಾಗೆ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿಕ್ಕೆ ಇದೆ ಎಂದು ಉದ್ಗರಿಸಿದರು.ಶ್ರೇಷ್ಠ ಧರ್ಮವನ್ನು ಉಳಿಸಲು ಕೈ ಜೋಡಿಸೋಣ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ಒಟ್ಟಾಗೋಣ ಎಂದು ಸಾರಿದರು.
ಈ ಕಾರ್ಯಕ್ರಮದಲ್ಲಿ 90 ಜನ ಉಪಸ್ಥಿತರಿದ್ದರು 19 ಮಂದಿ ಸಾಧಕರು ಭಾಗವಹಿಸಿದರು. ಕಾರ್ಯಕ್ರಮದ ನಂತರ ಸಂವಾದ ಕಾರ್ಯಕ್ರಮ ನಡೆಯಿತು.