ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪಿತ್ತಜನಕಾಂಗದ ಪ್ರಮುಖ ಶಸ್ತ್ರಚಿಕಿತ್ಸೆ

Spread the love

ಮಂಗಳೂರು: ದಕ್ಷಿಣ ಭಾರತದ ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸರಣಿಯಾದ ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್‍ನ ಅಂಗವಾಗಿರುವ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಮತ್ತು ಸಂಕೀರ್ಣವಾದ ಪಿತ್ತಜನಕಾಂಗದ ಬಲಭಾಗವನ್ನು ತೆಗೆದುಹಾಕುವ (ಹೆಮಿಹೆಪಟೆಕ್ಟೊಮಿ) ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ಕ್ಯಾನ್ಸರ್‍ರೋಗಶಾಸ್ತ್ರ ವಿಭಾಗವನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಕೆಎಂಸಿ ಆಸ್ಪತ್ರೆ ಒಂದಾಗಿದೆ. ಕೆಎಂಸಿ ಆಸ್ಪತ್ರೆಯ ಪಚನಾಂಗ ಮತ್ತು ಹೆಪಟೋಬಿಲಿಯರಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ಅತ್ಯಂತ ನಿಖರತೆ ಮತ್ತು ಶ್ರೇಷ್ಠತೆಯೊಂದಿಗೆ ಈ ಉನ್ನತ ಮಟ್ಟದ ವೈದ್ಯಕೀಯ ಸವಾಲನ್ನು ಸ್ವೀಕರಿಸಿ ಪರಿಹರಿಸಲಾಗಿದೆ. ಇದರೊಂದಿಗೆ 38 ವರ್ಷ ವಯಸ್ಸಿನ ವ್ಯಕ್ತಿಯ ಜೀವವನ್ನು ಉಳಿಸಲಾಗಿದೆ.

ಮಂಗಳೂರಿನ 28 ವರ್ಷ ವಯಸ್ಸಿನ ಸುಧೀರ್ ಶೆಟ್ಟಿ(ಹೆಸರು ಬದಲಿಸಲಾಗಿದೆ)ಗೆ ಪಿತ್ತಜನಕಾಂಗದ ಬಲಮಡಿಕೆಯಲ್ಲಿ ದೊಡ್ಡ ಗಡ್ಡೆ ಇರುವುದಾಗಿ ಪರೀಕ್ಷೆಯಿಂದ ತಿಳಿದು ಬಂದಿತ್ತು. ವೈದ್ಯಕೀಯ ತನಿಖೆಯಿಂದ ಇದು ಹೆಪಟೋಸೆಲ್ಯೂಲರ್ ಕಾರ್ಸಿನೋಮಾ ಅಂದರೆ ಒಂದು ರೀತಿಯ ಪಿತ್ತಜನಕಾಂಗದ ಕ್ಯಾನ್ಸರ್ ಎಂದು ತಿಳಿದಿತ್ತು. ಗಡ್ಡೆ 13 x 10 ಸೆಂಟಿಮೀಟರ್ ಗಾತ್ರವಿತ್ತು. ಗಡ್ಡೆಯೊಂದಿಗೆ ಆತನ ಪಿತ್ತ ಜನಕಾಂಗದ ಸಂಪೂರ್ಣ ಬಲ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕುವುದೇ ಆತನ ತೊಂದರೆಯನ್ನು ಗುಣಪಡಿಸಬಹುದಾದ ಏಕೈಕ ಮಾರ್ಗವಾಗಿತ್ತು.

ಆತನ ಆರೋಗ್ಯ ಸ್ಥಿತಿಯ ಆರಂಭದ ಮೌಲ್ಯೀಕರಣದ ನಂತರ ಎಲ್ಲ ವೈದ್ಯಕೀಯ ಸಾಧ್ಯತೆಗಳನ್ನು ಪರೀಕ್ಷಿಸಿದ ನಂತರ ಪಿತ್ತ ಜನಕಾಂಗದ ಬಲಭಾಗವನ್ನು ತೆಗೆದುಹಾಕುವುದು ಏಕೈಕ ಮಾರ್ಗವೆಂಬ ನಿರ್ಧಾರಕ್ಕೆ ಬರಲಾಯಿತು. ಆದರೆ ಮಂಗಳೂರಲ್ಲಿ ಇಂಥ ಶಸ್ತ್ರಕ್ರಿಯೆಯನ್ನು ನಡೆಸಿದ್ದೇ ಅತ್ಯಂತ ವಿರಳವಾಗಿತ್ತು.

ಕೆಎಂಸಿ ಆಸ್ಪತ್ರೆಯ ಪಚನಾಂಗ ಮತ್ತು ಹೆಪಟೋಬಿಲಿಯರಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಸತ್ಯನಾರಾಯಣ್ ಅವರ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿತ್ತು. ರೋಗಿ ಬೇಗನೆ ಚೇತರಿಕೆ ಕಂಡಿದ್ದು ಎಂಟು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದರು.

ಪಿತ್ತಜನಕಾಂಗದ ಗಡ್ಡೆ ಹೊಂದಿರುವವ ರೋಗಿಗಳಿಗೆ ಆಯಾ ಭಾಗಗಳನ್ನು ಕತ್ತರಿಸಿ ತೆಗೆದುಹಾಕುವ ಶಸ್ತ್ರಕ್ರಿಯೆಯೇ ಏಕೈಕ ಭರವಸೆಯ ಕಿರಣಗಳಾಗಿವೆ. ಆದಷ್ಟೂ ರೋಗದ ಆರಂಭದ ಹಂತದಲ್ಲಿಯೇ ತಜ್ಞ, ಪರಿಣಿತರ ಶಸ್ತ್ರಚಿಕಿತ್ಸಾ ತಂಡದಿಂದ ನಡೆಸಲಾದ ಶಸ್ತ್ರಕ್ರಿಯೆ ಈ ತೊಂದರೆಯನು ್ನ ಗುಣಪಡಿಸಬಹುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪರಿಣಿತರ ತಂಡ ಲಭ್ಯವಿರುವುದರಿಂದ ಪಿತ್ತಜನಕಾಂಗ ಭಾಗಗಳನ್ನು ಕತ್ತರಿಸಿ ತೆಗೆದುಹಾಕುವ ಶಸ್ತ್ರಕ್ರಿಯೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಕøಷ್ಟ ಫಲಿತಾಂಶಗಳೊಂದಿಗೆ ನಡೆಸಲಾಗುತ್ತಿದೆ. ಅತ್ಯಂತ ತಂತ್ರಜ್ಞಾನಗಳ ಬಳಕೆ ಮತ್ತು ಉತ್ತಮ ವೈದ್ಯರ ಸರಿಯಾದ ಮಿಶ್ರಣವೂ ಇದಕ್ಕೆ ನೆರವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಪಚನಾಂಗ ಮತ್ತು ಹೆಪಟೋಬಿಲಿಯರಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಸತ್ಯನಾರಾಯಣ್ ಹೇಳಿದರು

ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಕುರಿತು :

ಎಂಎಚ್‍ಇಪಿಎಲ್ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಂಗವಾಗಿದೆ. ಮುಂಚೂಣಿಯ ಆಸ್ಪತ್ರೆ ಜಾಲವನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೆಸರಲ್ಲಿ ನಡೆಸುತ್ತಿದೆ. ಎಂಎಚ್‍ಇಯು ಭಾರತದ 6 ರಾಜ್ಯಗಳ 13 ಸ್ಥಳಗಳಲ್ಲಿ ಹಾಗೂ ಮಲೇಷಿಯಾದ ಕ್ಲಾಂಗ್‍ನಲ್ಲಿನ ಒಂದು ಆಸ್ಪತ್ರೆಯೂ  ಸೇರಿದಂತೆ ಒಟ್ಟ 16 ಆಸ್ಪತ್ರೆಗಳಲ್ಲಿ ಸುಮಾರು 5200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಪ್ರಾಥಮಿಕ ಹಂತದಿಂದ ನಾಲ್ಕನೇ ಉನ್ನತ ಹಂತದ ಆರೈಕೆವರೆಗಿನ ಎಲ್ಲಾ ಚಿಕಿತ್ಸೆಗಳನ್ನು ಈ ಆಸ್ಪತ್ರೆಗಳ ಜಾಲ ಪೂರೈಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಸಂಸ್ಥೆ 2000ಕ್ಕೂ ಹೆಚ್ಚಿನ ವೈದ್ಯರು ಮತ್ತು 6000ಕ್ಕೂ ಹೆಚ್ಚಿನ ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ತಂಡವನ್ನು ಅಭಿವೃದ್ಧಿಪಡಿಸಿದ್ದು ಇವರು ಬದ್ಧತೆವುಳ್ಳವರಾಗಿದ್ದು ವೈದ್ಯಕೀಯ ಉತ್ಕøಷ್ಟತೆ ಹಾಗೂ ರೋಗಿ ಕೇಂದ್ರೀಕೃತ ನೀತಿಯುತ ಅಭ್ಯಾಸಗಳ ಮೌಲ್ಯಗಳಿಗೆ ಬದ್ಧತೆ ಹೊಂದಿದ್ದಾರೆ. ಇದರೊಂದಿಗೆ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೋಗ್ಯ ಶುಶ್ರೂಷೆಯನ್ನು ಪೂರೈಸುತ್ತಿದ್ದಾರೆ.

ಮಣಿಪಾಲ್ ಹಾಸ್ಪಿಟಲ್ಸ್ ಕುರಿತು :

ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಆದ್ಯಪ್ರವರ್ತಕರಾದ ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲಿ ್ಲ ಅತ್ಯಂತ ದೊಡ್ಡದಾದ ಆಸ್ಪತ್ರೆಗಳ ಜಾಲವಾಗಿದ್ದು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕೈಗೆಟಕುವ ರೀತಿಯಲ್ಲಿ ಮೂರನೇ ಉನ್ನತ ಹಂತದ ಬಹುವಿಶೇಷತೆಯ ಆರೋಗ್ಯ ಶುಶ್ರೂಷೆ ಚೌಕಟ್ಟನ್ನು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು ತನ್ನ ಎಲ್ಲಾ ಬಹುವಿಶೇಷತೆಯ ಪೂರೈಕೆ ಶ್ರೇಣಿಯ ಮೂಲಕ ಈ ಕ್ರಮವನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ಈ ಸೇವೆಯನ್ನು ಗೃಹ ಆರೈಕೆಗೆ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಮುಖ ನಾಲ್ಕನೇ ಉನ್ನತ ಹಂತದ ಆರೈಕೆಯ ಸೌಲಭ್ಯವನ್ನು ಸಂಸ್ಥೆ ಹೊಂದಿದ್ದು 8 ಮೂರನೇ ಉನ್ನತ ಹಂತದ ಆರೈಕೆಯ, 7 ಎರಡನೇ ಹಂತದ ಆರೈಕೆಯ ಮತ್ತು 2 ಪ್ರಾಥಮಿಕ ಹಂತದ ಆರೈಕೆಯ ಕ್ಲಿನಿಕ್‍ಗಳನ್ನು ಭಾರತ ಮತ್ತು ವಿದೇಶದಾದ್ಯಂತ ಸಂಸ್ಥೆ ಹೊಂದಿದ್ದು ಮಣಿಪಾಲ್ ಹಾಸ್ಪಿಟಲ್ಸ್ ಯಶಸ್ವಿಯಾಗಿ 5,200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಣಿಪಾಲ್ ಹಾಸ್ಪಿಟಲ್ಸ್ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆಯುವ ಆರೈಕೆಯನ್ನು ವಿಶ್ವದ ಎಲ್ಲೆಡೆಯ ರೋಗಿಗಳಿಗೆ ನೀಡುತ್ತಿದೆ.

ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಲ್ಲಿ ನೀತಿಯ ಮಟ್ಟಕ್ಕಾಗಿ ಎಎಎಚ್‍ಆರ್‍ಪಿಪಿ ಸಂಸ್ಥೆ ಮಾನ್ಯತೆಯನ್ನು ಮಣಿಪಾಲ್ ಹಾಸ್ಪಿಟಲ್ಸ್‍ಗೆ ನೀಡಿದೆ. ಎನ್‍ಎಬಿಎಲ್, ಎನ್‍ಎಬಿಎಚ್ ಮತ್ತು ಐಎಸ್‍ಒ ಮಾನ್ಯತೆಗಳನ್ನೂ ಈ ಸಂಸ್ಥೆ  ಪಡೆದಿರುತ್ತದೆ. ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಕಂಪನಿಯಾಗಿದ್ದು ಗ್ರಾಹಕ ಸಮೀಕ್ಷೆಯ ಪ್ರಕಾರ ಅತ್ಯಂತ ಹೆಚ್ಚು ರೋಗಿಗಳನ್ನು ಶಿಫಾರಸ್ಸು ಮಾಡಲಾಗುವ ಆಸ್ಪತ್ರೆಯಾಗಿದೆ.

ಸಂಪಾದಕೀಯ ವಿವರಗಳಿಗಾಗಿ ಸಂಪರ್ಕಿಸಿ: ಕವಿತಾಕಿಣಿ, ವೆಬರ್ ಶ್ಯಾಂಡ್‍ವಿಕ್, ಮೊಬೈಲ್ : +91 9886571641 , ಇಮೇಲ್: kkini@webershandwick.com

ಅಂಜನಾ ಚಂದ್ರನ್, ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್, ಮೊಬೈಲ್ : +91 9886278400. ಇಮೇಲ್:  anjana.chandran@manipalhospitals.com


Spread the love