ಮಂಗಳೂರು: ಅಂತರ್ ರಾಜ್ಯ ಮರಳು ವಂಚಕರ ಬಂಧನ

Spread the love

ಮಂಗಳೂರು: ಒರಿಸ್ಸಾ ರಾಜ್ಯದಿಂದ ಮರಳನ್ನು ತರುವುದಾಗಿ ನಕಲೀ ದಾಖಲಾತಿಗಳನ್ನು ಸೃಷ್ಟಿಸಿ ದ.ಕ ಜಿಲ್ಲೆಯ ಆಸುಪಾಸುಗಳಲ್ಲಿ ಮರಳನ್ನು ಕಾನೂನು ಬಾಹಿರವಾಗಿ ಲಾರಿಯಲ್ಲಿ ತುಂಬಿ ವಾಣಿಜ್ಯ ಇಲಾಖೆಯ ನಕಲೀ ಸೀಲುಗಳನ್ನು ತಯಾರಿಸಿ ಅವುಗಳನ್ನು ಬಿಲ್ಲುಗಳಲ್ಲಿ ಬಳಸಿ ನೆರೆಯ ಕೇರಳ ರಾಜ್ಯಕ್ಕೆ ಸಾಗಿಸಿ ಕರ್ನಾಟಕ ರಾಜ್ಯಕ್ಕೆ ರಾಜಸ್ವವನ್ನು ವಂಚಿಸುತ್ತಿರುವ ಕುಖ್ಯಾತ ಜಾಲವನ್ನು ಉರ್ವ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರು ಹಾಗೂ ಸಿಬ್ಬಂದಿಯವರು ಭೇದಿಸಿರುತ್ತಾರೆ.
ಬಂಧಿತರನ್ನು ಕೇರಳ ರಾಜ್ಯ ಕಾಸರಗೋಡು ನಿವಾಸಿಗಳಾದ ಮಹಮ್ಮದ್ ಮುಸ್ತಾಪ ಹಾಗೂ ಸಚಿನ್ ಸಾಲ್ಯಾನ್ ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರವರ ಆದೇಶದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತೆಲೆಮರೆಸಿಕೊಂಡಿದ್ದ ಈ ಕೆಳಗಿನ ಆರೋಪಿತರನ್ನು ಬಂಧಿಸಲಾಗಿದೆ.

ಮಂಗಳೂರು ನಗರ ರವರ ಆದೇಶದ ಮೇರೆಗೆ ಮಾನ್ಯ ಪೊಲೀಸ್ ಉಪಾಯುಕ್ತರು, (ಕಾ & ಸು) ಮತ್ತು ಪೊಲೀಸ್ ಉಪಾಯುಕ್ತರು, (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ ರವರ ಮಾರ್ಗದರ್ಶನದಂತೆ ಉರ್ವ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ರವೀಶ್‌ ಎಸ್‌ ನಾಯಕ್‌ ರವರುಗಳು ಸಿಬ್ಬಂದಿಯವರ ಜೊತೆ ಆರೋಪಿತರುಗಳ ಚಲನವಲನದ ಬಗ್ಗೆ ಮುಂಚಿತ ಮಾಹಿತಿ ಸಂಗ್ರಹಿಸಿ ವಶಕ್ಕೆ ಪಡೆದು ದಸ್ತಗಿರಿ ಮಾಡಿರುತ್ತಾರೆ.


Spread the love