Home Mangalorean News Kannada News ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ!

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ!

Spread the love

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ!

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ.

ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು ಅಲ್ಲೇ ಇತ್ತು. ಏರ್ ಪೋರ್ಟ್​ನಲ್ಲಿ ಬಾಂಬ್ ಸ್ಕ್ವಾಡ್​ನಿಂದ ತಪಾಸಣೆ ನಡೆಸಲಾಯಿತು.

ಬಜಪೆ ಪೊಲೀಸರು ಮತ್ತು ಏರ್ ಪೊರ್ಟ್ ಭದ್ರತಾ ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದ್ದು, ಅದರಲ್ಲಿ ವೈರ್​ಗಳನ್ನು ಜೋಡಿಸಲಾಗಿತ್ತು. ವಿವಿಧ ಪ್ರಕಾರಗಳ ಬಾಂಬ್​ಗಳಿರುತ್ತವೆ. ಅದರಲ್ಲಿ ಟೈಮರ್​ ಡಿವೈಸರ್​, ಫೋನ್​ ಆ್ಯಕ್ಟಿವ್​ ಮುಂತಾದ ವಿಧಗಳಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದನ್ನು ನಿಷ್ಕ್ರಿಯಗೊಳಿಸಲು ಬಾಂಬ್​ ನಿಷ್ಕ್ರಿಯ ವಾಹನ ಆಗಮಿಸಿದ್ದು ಅದರೊಳಗೆ ಬಾಂಬ್​ನ್ನು ತಜ್ಞರು ಕೊಂಡೊಯ್ದಿದ್ದಾರೆ. ಆದಷ್ಟು ಬೇಗ ಬಾಂಬ್​ ನಿಷ್ಕ್ರಿಯಗೊಳಿಸುವ ಕಾರ್ಯ ಮಾಡಲಾಗುತ್ತಿದೆ.


Spread the love

Exit mobile version