Home Mangalorean News Kannada News ಮಂಗಳೂರು: ಅಕ್ರಮ ಬಡ್ಡಿ ವಸೂಲಿ: ಪೊಲೀಸ್ ಆಯುಕ್ತರ ಎಚ್ಚರಿಕೆ

ಮಂಗಳೂರು: ಅಕ್ರಮ ಬಡ್ಡಿ ವಸೂಲಿ: ಪೊಲೀಸ್ ಆಯುಕ್ತರ ಎಚ್ಚರಿಕೆ

Spread the love

ಮಂಗಳೂರು ; ಸಾರ್ವಜನಿಕ ಅನುಕೂಲಕ್ಕಾಗಿ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ-2004 ಸೆಪ್ಟೆಂಬರ್ 2003 ರಿಂದ ಜಾರಿಯಲ್ಲಿರುತ್ತದೆ. ಯಾವೊಬ್ಬ ವ್ಯಕ್ತಿಯು ಮಿತಿ ಮೀರಿದ ಬಡ್ಡಿ ವಿಧಿಸುವುದನ್ನು ನಿಷೇಧಿಸಲು ಮತ್ತು ತೊಂದರೆಗಳನ್ನು ನಿವಾರಿಸಲು, ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಕಠಿಣ ಶಿಕ್ಷೆ ಹಾಗೂ ಮೂರು ವರ್ಷಗಳ ಕಾರಾಗೃಹ ವಾಸ, ಮುವ್ವತ್ತು ಸಾವಿರ ರೂಪಾಯಿಗಳ ದಂಡ ವಿದಿಸಬಹುದಾಗಿದೆ.

ಬಡ್ಡಿಯ ಹೊಂದಾಣಿಕೆ ಅಥವಾ ಆತ್ಮಹತ್ಯೆಗೆ ಪ್ರೇರಣೆ ನೀಡುವಂತಾಹ ಪ್ರಕರಣಗಳು ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಸಹಾಯಕ ಪೋಲಿಸ್ ಆಯುಕ್ತರು, ಸೆಂಟ್ರಲ್ ಉಪವಿಭಾಗ ಮೊಬೈಲ್ 9480805320), ಸಹಾಯಕ ಪೋಲಿಸ್ ಆಯುಕ್ತರು, ದಕ್ಷಿಣ (94808023100, ಸಹಾಯಕ ಪೋಲಿಸ್ ಆಯುಕ್ತರು, ಉತ್ತರ (9480805322) ಅಥವಾ ಪೋಲಿಸ್ ಕಂಟ್ರೋಲ್ ರೂಂ. 100/ 2220800 ದೂರು ನೀಡಬಹುದು.

ಮಿತಿ ಮೀರಿದ ಬಡ್ಡಿ ತೆಗೆದುಕೊಳ್ಳುವುದು ಅಪರಾಧವಾಗಿದ್ದು, ಬಡ್ಡಿಗಾಗಿ ಪೀಡಿಸುತ್ತಿರುವವರ ವಿರುದ್ದ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೋಲಿಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version