ಮಂಗಳೂರು: ಅನೈತಿಕ ಗೂಂಡಾಗಿರಿಯಿಂದ ಹಲ್ಲೆಗೊಳಗಾದ ಯುವಕನ ವಿರುದ್ದ ವಿರುದ್ಧ ಹಲ್ಲೆಗೊಳಗಾದ ಸಂದರ್ಭ ಆತನೊಂ ದಿಗೆ ಇದ್ದ ಯುವತಿ ಪೋಲಿಸರಿಗೆ ದೂರು ನೀಡಿದ್ದಾಳೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಯುವತಿ, ‘‘ಹುಟ್ಟೂರಾದ ಬೇಲೂರಿನಿಂದ ಕೆಲಸಕ್ಕಾಗಿ 2 ವರ್ಷಗಳ ಹಿಂದೆ ನಾನು ಮಂಗಳೂರಿಗೆ ಬಂದೆ. ಇಲ್ಲಿ ನನ್ನ ದೊಡ್ಡಮ್ಮಳ ಮನೆಯಲ್ಲಿ ವಾಸವಾಗಿದ್ದು, 3 ತಿಂಗಳ ಹಿಂದೆ ಅತ್ತಾವರದ ಮಾಲ್‌ನಲ್ಲಿ ಕೆಲಸಕ್ಕೆ ಸೇರಿದ್ದೇನೆ. ಅಲ್ಲಿ ನನಗಿಂತ ಉನ್ನತ ಹುದ್ದೆಯಲ್ಲಿದ್ದ ಯುವಕನ ನನಗೆ ಪರಿಚಯ ವಿತ್ತು. ಕೆಲಸದ ವಿಚಾರದಲ್ಲಿ ನಾವು ಮಾತ ನಾಡುತ್ತಿದ್ದೆವು. ಒಂದು ದಿನ ಮಾಲ್‌ನಿಂದ ಮನೆಗೆ ಹೋಗುವಾಗ ನಂದಿಗುಡ್ಡೆ ಬಸ್ ತಂಗುದಾಣದವರೆಗೆ ಡ್ರಾಫ್ ಕೊಡುವುದಾಗಿ ಕರೆದಾಗ ನಾನು ಆತನ ಕಾರಿನಲ್ಲಿ ತೆರಳಿದ್ದೇನೆ. ಆ ವೇಳೆ ಆತ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಇದಾದ ಬಳಿಕ ಆತ ಹಣದ ಆಮಿಷ ತೋರಿಸಿ ಜೊತೆಗೆ ಬರುವಂತೆ ಒತ್ತಾ ಯಿಸುತ್ತಿದ್ದ. ಆ.24ರಂದು ಸಂಜೆ 5 ಗಂಟೆಗೆ ಡ್ರಾಫ್ ಕೊಡುವುದಾಗಿ ಹೇಳಿ ಅತ್ತಾವರ ಆಸ್ಪತ್ರೆಯ ಬಳಿ ನನಗಾಗಿ ಕಾದು ಕುಳಿತಿದ್ದ. ನನ್ನನ್ನು ನೋಡಿ ಬಲವಂತವಾಗಿ ಕಾರಿನೊಳಗೆ ಆತ ಸೆಳೆದಾಗ ನಾನು ಸಹಾಯಕ್ಕೆ ಕೂಗಿಕೊಂಡೆ. ಆಗ ಅಲ್ಲಿದ್ದವರು ನನ್ನನ್ನು ಆತನಿಂದ ಬಿಡಿಸಿದ್ದಾರೆ. ಈ ಸಂದರ್ಭ ಆತ ತನ್ನೊಂದಿಗಿರುವ ವೀಡಿಯೊ ಇದ್ದು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿ ಸಿದ್ದಾನೆ. ಈ ಹಿನ್ನೆಲೆಯಲ್ಲಿ ನನಗೆ ಆತನಿಂದ ರಕ್ಷಣೆ ನೀಡಬೇಕು ’’ ಎಂದು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.