ಮಂಗಳೂರು ಅಭಿವೃದ್ಧಿಗೆ 135 ಕೋಟಿ ರೂಪಾಯಿ ಯೋಜನೆ : ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರವನ್ನು ಸುಂದರ ನಗರವನ್ನಾಗಿ ಮಾಡಲು 135 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಮಂಜೂರು ಮಾಡಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಅವರು ಇಂದು ಉರ್ವಾ ಮಾರಿಗುಡಿ ದ್ವಾರದಿಂದ ಉರ್ವಾ ಮಾರುಕಟ್ಟೆ ವೃತ್ತದ ವರಗೆ ಸುಮಾರು 1.25 ಕೋಟಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಮಂಗಳೂರು ನಗರವನ್ನು ಅಭಿವೃದಿ ಗೊಳಿಸುವ ವಿಚಾರದಲ್ಲಿ ರಾಜಕೀಯಬೇಡ. ಪಕ್ಷವನ್ನು ಮರೆತು ಮಂಗಳೂರು ಬೆಳೆಯುತ್ತಿರುವ ನಗರಗಳಲ್ಲಿ ಮುಂಚೂಣಿಯಲ್ಲಿ ಬರಬೇಕು ಎನ್ನುವುದೇ ಮುಖ್ಯ ಎಂದು ನುಡಿದರು.
ಪ್ರವಾಸೋಧ್ಯಮ ವಿಚಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ. ಈ ಮಾರ್ಗ ನಿರ್ಮಾಣ ಪೂರ್ತಿಯಾದರೆ ಸುಲ್ತಾನ್ ಬತ್ತೇರಿಗೂ ಹೋಗಲು ಅನುಕೂಲವಾಗುತ್ತದೆ. ಪರಿಸರದಲ್ಲಿ ಹೊಸಬೆಳವಣಿಗೆ ಕಾಣುತ್ತೇವೆ. ರಾಜ್ಯದಲ್ಲಿ ಬೆಳೆಯುತ್ತಿರುವ ನಗರಗಲ್ಲೇ ಮಂಗಳೂರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.
ಇದು ಪ್ರಾರಂಭದಲ್ಲಿ 1.25 ಕೋಟಿ ರೂಪಾಯಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದೆ 2 ಕೋಟಿ ರೂಪಾಯಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಶಾಸಕರೂ ತಿಳಿಸಿದರು.
ಮೂಡದಿಂದ ಈ ಭಾಗದಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಬರಲಿದೆ. ಈ ಮೂಲಕ ಮಂಗಳೂರನ್ನು ಆಧುನಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದರು.
ಸಮಾರಂಭದಲ್ಲಿ ಉಪಮೇಯರ್ ಸುಮಿತ್ರ, ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸ್ ಲಾರ್ಟ್ ಪಿಂಟೊ, ಕಾರ್ಪೊರೇಟರ್ ರಾಧಾಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಕುಮಾರ್ ದಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ರಾವ್, ಕೆ.ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ನಗರಪಾಲಿಕೆ ಇಂಜಿನಿಯರ್ ಲಿಂಗೇಗೌಡ ಮತ್ತಿತರರು ಹಾಜರಿದ್ದರು.