Home Mangalorean News Kannada News ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿ; ಡಾ .ಬಿ.ಎಂ. ಹೆಗ್ದೆ

ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿ; ಡಾ .ಬಿ.ಎಂ. ಹೆಗ್ದೆ

Spread the love

ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿಯ 184ನೇ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಿಗ್ಗೆ 8.50ಕ್ಕೆ ಹೃದ್ರೋಗ ತಜ್ಞರಾದ ಡಾ.ಬಿ.ಎಂ.ಹೆಗ್ದೆ ಭಾಗವಹಿಸಲಿದ್ದಾರೆ.

DSCN0886
ಇವರು ವೈದ್ಯಕೀಯ ರಂಗದ ಶಿಕ್ಷಣ ತಜ್ಞ, ಸಂಶೋಧಕ. ಲೇಖಕರಾಗಿ ಹೆಸರುವಾಸಿಯಾದ ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞರು. ವ್ಯಕ್ತಿಯ ಪೂರ್ಣ ದೇಹಕ್ಕೆ ರೋಗ ಶಮನ ಚಿಕಿತ್ಸಾ ಕ್ರಮದ ರೂವಾರಿಯಾಗಿ ವಿಶ್ವಮಟ್ಟದಲ್ಲೇ ಹೆಸರು ಪಡೆದವರು. 45 ವರ್ಷ ವೈದ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದವರು. ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಭಾರತೀಯ ಹಾಗೂ ವಿದೇಶಗಳ ಹಲವು ವಿ.ವಿ.ಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿ ಮತ್ತು ಲಂಡನ್ ಎಂ.ಆರ್,ಸಿ,ಪಿ ಯ ಮೊದಲ ಭಾರತೀಯ ಪರೀಕ್ಷಕರಾಗಿ ದುಡಿದವರು.

2010 ರಲ್ಲಿ ಪದ್ಮಭೂಷಣ. ಡಾ.ಬಿ.ಸಿ ರಾಯ್ ರಾಷ್ರ್ಟೀಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದವರು. ಕನ್ನಡ-ಇಂಗ್ಲೀಷಿನಲ್ಲಿ 35ಕ್ಕೂ ಹೆಚ್ಚು ಕೃತಿಗಳನ್ನು 300 ರಷ್ಡು ಸಂಶೋಧನಾ ಲೇಖನಗಳು ಹಾಗೂ 3000 ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಖ್ಯಾತರಾದವರು. ಇದರ ‘ಹೋಲಿಸ್ಟಿಕ್ ಮೆಡಿಸಿನ್’ ಕೃತಿ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಕಡಿಮೆ ವೆಚ್ಚದಲ್ಲಿ ರೋಗ ಚಿಕಿತ್ಸೆಯ ಪ್ರವರ್ತಕರಾಗಿ ಸಂಶೋಧನೆ, ಅನುಷ್ಠಾನ ಮಾಡಿದವರು. ರಾಜ್ಯ ಸರಕಾರಗಳ ಆರೋಗ್ಯ ಯೋಜನೆಗಳ ಮಾರ್ಗದರ್ಶಕರಾಗಿ ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂದರ್ಶನದಲ್ಲಿ ತಮ್ಮ ಜೀವನದ ಸಾಧನೆಯ ಹೆಜ್ಜೆಗಳನ್ನು ತಿಳಿಸಿದ್ದಾರೆ

ಇವರನ್ನು ಕಾರ್ಯಕ್ರಮ ನಿವರ್ಾಹಕರಾದ ಡಾ.ಸದಾನಂದ ಪೆರ್ಲ ಸಂದಶರ್ಿಸಿದ್ದಾರೆ.
ಮುಂದಿನ ವಾರದ ಅತಿಥಿಯಾಗಿ ಸಮಾಜ ಸೇವಕರೂ ಹಾಗೂ ಕೃಷಿಕರಾದ ಶ್ರೀ ಚಂದ್ರಕಾಂತ ರಾವ್ ಇನ್ನ ಭಾಗವಹಿಸಲಿದ್ದಾರೆ.


Spread the love

Exit mobile version