ಮಂಗಳೂರು: ಆನೆಕಾಲು ರೋಗ ನಿಯಂತ್ರಣ- 3 ತಾಲೂಕುಗಳ ಆಯ್ಕೆ 

Spread the love

ಮಂಗಳೂರು: ಆನೆಕಾಲು ರೋಗ ನಿಯಂತ್ರಣ- 3 ತಾಲೂಕುಗಳ ಆಯ್ಕೆ 

ಮಂಗಳೂರು: ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರೋಗ ಪ್ರಸಾರ ನಿರ್ಧಾರಣಾ ಸಮೀಕ್ಷಾ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಇವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ರೋಗ ಪ್ರಸರಣ ಮೌಲ್ಯದ ಸಮೀಕ್ಷೆಯು ನವೆಂಬರ್ 26ರಿಂದ 30 ರವರೆಗೆ ಮಂಗಳೂರು ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದೆ ಈ ಸ್ಥಳಗಳಿಂದ 39 ಶಾಲೆಗಳನ್ನು ಆಯ್ಕೆಮಾಡಿ, ಹೆಚ್ಚುವರಿಯಾಗಿ 15 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 1 ಮತ್ತು 2ನೇ ತರಗತಿಯಲ್ಲಿ ವ್ಯಾಸಂಗ ಮಾಡುವ 1693 ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು, 10 ತಂಡಗಳನ್ನು ರಚಿಸಿ 200 ಮಕ್ಕಳನ್ನು ಒಂದು ತಂಡವಾಗಿ ಮಾಡಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಈ ಹಂತದಲ್ಲಿ ಶಾಲಾ ಶಿಕ್ಷಕರಿಂದ ಹಾಗೂ ಮಕ್ಕಳ ಪೋಷಕರಿಂದ ಸಂಪೂರ್ಣ ಸಹಕಾರ ಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿ ಸೆಲ್ವಮಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಮಾರ್ ಹೆಚ್ ಡಿವೆಲ್ಲೊ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.


Spread the love