Home Mangalorean News Kannada News ಮಂಗಳೂರು: ಆನ್ ಲೈನ್ ಆಟದ ವಂಚನೆ: ಯುವಕ ಆತ್ಮಹತ್ಯೆ

ಮಂಗಳೂರು: ಆನ್ ಲೈನ್ ಆಟದ ವಂಚನೆ: ಯುವಕ ಆತ್ಮಹತ್ಯೆ

Spread the love

ಮಂಗಳೂರು: ಆನ್ ಲೈನ್ ಆಟದ ವಂಚನೆ: ಯುವಕ ಆತ್ಮಹತ್ಯೆ

ಮಂಗಳೂರು: ಆನ್ಲೈನ್ ಆಟದಿಂದ ವಂಚನೆಗೊಳಗಾದ ಯುವಕನೋರ್ವ ಮನ ನೊಂದು ಗುರುವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಡುಶೆಡ್ಡೆ ನಿವಾಸಿ ಸೂರ್ಯ ಶೆಟ್ಟಿ (23) ಮೃತಪಟ್ಟ ಯುವಕ.

ಈತ ಆನ್ಲೈನ್ನಲ್ಲಿ ಹಣವನ್ನು ಹೂಡಿಕೆ ಮಾಡಿ ಅಟವಾಡುತ್ತಿದ್ದ. ಬುಧವಾರವೂ ತನ್ನ ಗೆಳೆಯನಿಂದ 83 ಸಾವಿರ ರೂ. ಸಾಲ ಪಡೆದು ಆನ್ಲೈನ್ ಆಟವಾಡಿ ಹಣ ಕಳೆದುಕೊಂಡಿದ್ದ ಇದರಿಂದ ಮತ್ತಷ್ಟು ಚಿಂತೆಗೊಳಗಾದ ಯುವಕ ಬುಧವಾರ ರಾತ್ರಿ ಮೊಬೈಲ್ ಮನೆಯಲ್ಲಿಯೇ ಇಟ್ಟು ಮರವೂರು ಸೇತುವೆ ನಮೀಪ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಲಸ ಹುಡುಕುತ್ತಿದ್ದ ಈತ ಮೇರಿಹಿಲ್ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಕೆಲ ಸಮಯದ ಹಿಂದೆ ಆ ಉದ್ಯೋಗ ಬಿಟ್ಟು ಬೇರೆಡೆ ಕೆಲಸ ಹುಡುಕುತ್ತಿದ್ದ ಯುವಕ ಬಿಎಸ್ಸಿ ಪದವೀಧರನಾಗಿದ್ದು, ಪ್ರತಿಭಾನ್ವಿತನಾಗಿದ್ದ.

ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version