ಮಂಗಳೂರು: ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಮಂಗಳೂರು: ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಈ ಕೆಳಗೆ ನಮೂದಿಸಿದ ಹುದ್ದೆಗಳನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಎಪ್ರಿಲ್ 7 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಇಲ್ಲಿ ನೇರ ಸಂದರ್ಶನಕ್ಕೆ ನಡೆಯಲಿದೆ.

ಹುದ್ದೆಯ ವಿವರ: ವೈದ್ಯರು/ತಜ್ಞರು 10 ಹುದ್ದೆಗಳು. ವೇತನ ; 60 ಸಾವಿರ, ವಿದ್ಯಾರ್ಹತೆ ; ಯಾವುದೆ ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಆಗಿರಬೇಕು), ಶುಶ್ರೂಷಕರು 20 ಹುದ್ದೆಗಳು ವೇತನ ; 20 ಸಾವಿರ, ವಿದ್ಯಾರ್ಹತೆ ; ಕರ್ನಾಟಕ ಸರ್ಕಾರದಿಂದ ನೋಂದಾಯಿತ ಸಂಸ್ಥೆಗಳಿಂದ ಪದವಿ ಪಡೆದಿರಬೇಕು. ಪ್ರಯೋಗ ಶಾಲಾ ತಜ್ಞರು 5 ಹುದ್ದೆಗಳು: ವೇತನ – 15 ಸಾವಿರ, ವಿದ್ಯಾರ್ಹತೆ ; ಕರ್ನಾಟಕ ಅರೆವೈದ್ಯಕೀಯ ಮಂಡಳಿಯಿಂದ 2 ಅಥವಾ 3 ವರ್ಷಗಳ ಕಿ.ವೈ.ಪ್ರ.ಶಾ ತಂತ್ರಜ್ಞರ ತರಬೇತಿ (ಆಐಒಖಿ) ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಪಡೆದಿರಬೇಕು. ಗ್ರೂಪ್ ಡಿ 10 ಹುದ್ದೆಗಳು ವೇತನ- 12 ಸಾವಿರ, ವಿದ್ಯಾರ್ಹತೆ : ಎಸೆಸೆಲ್ಸಿ ತೇರ್ಗಡೆಯಾಗಿರಬೇಕು.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತುತಿ ಕುಟುಂಬ ಕಲ್ಯಾಣ ಕಚೇರಿ ಮಂಗಳೂರು ಅಥವಾ ದೂರವಾಣಿ ಸಂಖ್ಯೆ : 0824-2423672 ಸಂಪರ್ಕಿಸಲು ದ.ಕ. ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆ ತಿಳಿಸಿದೆ.


Spread the love