ಮಂಗಳೂರು: ಎತ್ತಿನಹೊಳೆ ;ವೀರಪ್ಪ ಮೊಯ್ಲಿಗೆ ಕಪ್ಪುಬಾವುಟ, ಚಪ್ಪಲಿ ಪ್ರದರ್ಶನ ; ಪ್ರತಿಭಟನಾಕಾರರ ಬಂಧನ

Spread the love

ಮಂಗಳೂರು: ಸಹ್ಯಾದ್ರಿ ಸಂರಕ್ಷಣಾ ಸಂಚಯ ಇದರ ಕಾರ್ಯಕರ್ತರು ಶನಿವಾರ ಮಾಜಿ ಮುಖ್ಯಮಂತ್ರಿ, ಹಾಲಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೋಯ್ಲಿ ಅವರಿಗೆ ಎತ್ತಿನಹೊಳೆ ವಿಷಯವಾಗಿ ಘೇರಾವ್ ಹಾಕಿದರು.

16-veerappa-moily-20150912-015 13-veerappa-moily-20150912-012 11-veerappa-moily-20150912-010 15-veerappa-moily-20150912-014

ಶಕ್ತಿನಗರದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ವೀರಪ್ಪ ಮೊಯ್ಲಿ ಆಗಮಿಸಿದ್ದು, ಮಾಹಿತಿ ಪಡೆದ ಸಂಘಟನೆಯ ಮುಖಂಡರಾದ ದೀನೇಶ್ ಹೊಳ್ಳ ಮತ್ತಿತರು ಮೊಯ್ಲಿ ಕಾರ್ಯಕ್ರಮ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆ ಅವರ ಕಾರನ್ನು ಅಡ್ಡಗಟ್ಟಿ, ಸಪ್ಟೆಂಬರ್ 19 ರಂದು ಎತ್ತಿನಹೊಳೆ ಯೋಜನೆ ಸಂಬಂಧಿಸಿ ಏರ್ಪಡಿಸಲಾದ ಸಭೆಗೆ ಹಾಜರಾಗುವಂತೆ ಕೋರಿದರು. ಆದರೆ ಇದಕ್ಕೆ ವಿರಪ್ಪ ಮೋಯ್ಲಿ ನಿರಾಕರಿಸಿ ಯೋಜನೆಯು ನನ್ನ ಸ್ವಂತದಲ್ಲ ತನ್ನ ಕ್ಷೇತ್ರದ ಜನತೆಗೆ ನೀರಿನ ಅಭಾವವಿದ್ದು, ಎತ್ತಿನಹೊಳೆಯ ಯೋಜನೆಯಿಂದ 4 ನಾಲ್ಕು ತಿಂಗಳು ಅಲ್ಲಿನ ಜನತೆ ಶುದ್ದ ಕುಡಿಯುವ ನೀರನ್ನು ಪಡೆಯುವ ಯೋಜನೆ ಇದಾಗಿದ್ದು, ತಾನೇನು ಇಡೀ ನದಿಯನ್ನು ನೀಡಿ ಎಂದು ಕೇಳುತ್ತಿಲ್ಲ ಎಂದು ಉಡಾಫೆಯಾಗಿಯೇ ಉತ್ತರಿಸಿದರು. ಇದರ ಕುರಿತು ಸಂಬಂಧಪಟ್ಟವರಲ್ಲಿ ಮಾತನಾಡುವುದಾಗಿ ಹೇಳಿ ಕಾರನ್ನೇರಿದರು.

ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಮೊಯ್ಲಿ ವಿರುದ್ದ ಕಪ್ಪು ಬಾವುಟ ಹಾಗೂ ಶೂಗಳ ಪ್ರದರ್ಶನ ಮಾಡಿದರು. ಪೋಲಿಸರ ವಿನಂತಿಯ ಮೇರೆಗೂ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಕ್ಕಾಗಿ ಪ್ರತಿಭಟನಾಕಾರರನ್ನು ಕಂಕನಾಡಿ ಪೋಲಿಸರು ಬಂಧಿಸಿದರು.


Spread the love