ಮಂಗಳೂರು: ಎಪ್ರಿಲ್ 25 ರಂದು ಬ್ಯಾರಿ ನಾಟಕಗಳ ಪುಸ್ತಕ ಹಾಗೂ ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಸಮಾರಂಭ

Spread the love

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ದಿನಾಂಕ 27-04-2015ರ ಸೋಮವಾರದಂದು ಮಧ್ಯಾಹ್ನ 2:30 ಗಂಟೆಗೆ ಹಂಪನಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ “ಎರಂಟೆ”- ಎರಡು ಬ್ಯಾರಿ ನಾಟಕಗಳ ಪುಸ್ತಕ ಹಾಗೂ “ಕೊತ್ತಿಪ್ಪೂ”- ಬ್ಯಾರಿ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಬಿ.ಎ. ಮುಹಮ್ಮದ್ ಹನೀಫ್ ವಹಿಸಲಿದ್ದು, ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖಾ ಸಚಿವರಾದ ಬಿ. ರಮಾನಾಥ ರೈಯವರು ಇಸ್ಮಾಯಿಲ್ ಮೂಡುಶೆಡ್ಡೆ ಬರೆದ ಅಕಾಡೆಮಿ ಪ್ರಕಟಿಸಿದ ಬ್ಯಾರಿ ನಾಟಕ ಪುಸ್ತಕದ ಬಿಡುಗಡೆಯನ್ನು ಮಾಡಲಿರುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರಾದ ಯು.ಟಿ. ಖಾದರ್ ಇವರು ಬಶೀರ್ ಅಹ್ಮದ್ ಕಿನ್ಯಾ ಇವರ ಸಾಹಿತ್ಯದ ಮತ್ತು ಅಕಾಡೆಮಿ ಹೊರತಂದ ಬ್ಯಾರಿ ಹಾಡುಗಳ ಸಿ.ಡಿ.ಯನ್ನು ಬಿಡುಗಡೆ ಮಾಡಲಿರುವರು. ಹೊಸ ಬ್ಯಾರಿ ಹಾಡುಗಳ ಸಿ.ಡಿ. ತಯಾರಿಕೆಗೆ ಅಕಾಡೆಮಿಯಿಂದ ಆದೇಶ ಹಸ್ತಾಂತರವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊದಿನ್ ಬಾವಾ ಮಾಡಲಿರುವರು.

ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾಣರ್ಿಕ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಹಿರಿಯರಂಗ ನಟ ನಿದರ್ೆಶಕರಾದ ವಿ.ಜಿ. ಪಾಲ್, ಅಖಿಲ ಭಾರತ ಬ್ಯಾರಿ ಪರಿಷತ್ ಇದರ ಸ್ಥಾಪಕಾಧ್ಯಕ್ಷರಾದ ಜನಾಬ್ ಜೆ. ಹುಸೈನ್, ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಜನಾಬ್ ಬಿ.ಎ. ಶಂಶುದ್ದೀನ್ ಮಡಿಕೇರಿ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಕರ್ತರಾದ ಹಂಝ ಮಲಾರ್ ಪುಸ್ತಕ ಪರಿಚಯವನ್ನು ಮಾಡಲಿದ್ದು, ಸಮನ್ವಯ ಮುಸ್ಲಿಮ್ ಶಿಕ್ಷಕರ ಸಂಘ, ದ.ಕ. ಜಿಲ್ಲೆ ಇದರ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ತುಂಬೆ ಇವರು ಬ್ಯಾರಿ ಹಾಡುಗಳ ಸಿ.ಡಿ. ಪರಿಚಯವನ್ನು ಮಾಡಲಿರುವರು.
ಇದೇ ಸಂದರ್ಭದಲ್ಲಿ ಅಕಾಡೆಮಿಕ್ ಕೌನ್ಸಿಲ್ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸದಸ್ಯರಾದ ರಿಯಾಝ್ ಬಂಟ್ವಾಳ, ಸಂಗೀತ ನಿದರ್ೆಶಕ ಕಮರುದ್ದೀನ್ ಕೀಚೇರಿ, ಬಹುಭಾಷಾ ಕವಿ ಬಶೀರ್ ಅಹ್ಮದ್ ಕಿನ್ಯಾ, ಬಹುಭಾಷಾ ಕಲಾವಿದ ಇಸ್ಮಾಯಿಲ್ ಮೂಡುಶೆಡ್ಡೆ ಇವರನ್ನು ಗೌರವಿಸಲಾಗುವುದು ಹಾಗೂ ಅಕಾಡೆಮಿಯ ಸದಸ್ಯ ಯೂಸುಫ್ ವಕ್ತಾರ್ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿರುತ್ತಾರೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love