ಮಂಗಳೂರು:ಆರ್ಚ್ ಬಿಷಪ್ ಹಾಗೂ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥರು ಆಗಿರುವ ಕಾರ್ಡಿನಲ್ ಮಾರ್ ಜೋರ್ಜ್ ಅಲಂಚೇರಿ ಅವರು ಎಪ್ರಿಲ್ 30 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಇದು ಅವರ ಪ್ರಥಮ ಕರ್ಣಾಟಕ ಭೇಟಿಯಾಗಿದೆ.
ಪ್ರಥಮ ಬಾರಿಗೆ ಅಗಮಿಸುತ್ತಿರುವ ಅವರನ್ನು ವಿವಿಧ ಕ್ಷೇತ್ರಗಳ ಪ್ರಮುಖರ ಉಪಸ್ಥಿತಿಯಲ್ಲಿ ಕಂಕನಾಡಿಯ ಸೈಂಟ್ ಆಲ್ಪೋನ್ಸಾ ಕೆಥೊಲಿಕ್ ಫೊರೆನೆ ಚರ್ಚ್ನಲ್ಲಿ ಬರಮಾಡಿಕೊಳ್ಳಲಾಗುವುದು. ನಗರದಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿಲ ಪಾಲ್ಗೊಂಡು ಸಂದೇಶ ನೀಡಲಿರುವರು.
ಸ್ವಾಗತ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ ಆರ್ ಲೋಬೊ ಹಾಗೂ ಐವನ್ ಡಿ’ಸೋಜಾ, ಮೇಯರ್ ಜಸಿಂತಾ ಆಲ್ಫ್ರೆಡ್, ಮಂಗಳೂರು ಬಿಷಪ್ ಡಾ ಎಲೋಶೀಯಸ್ ಪಾವ್ಲ್ ಡಿ’ಸೋಜಾ, ಬೆಳ್ತಂಗಡಿ ಬಿಷಪ್ ಡಾ ಲೋರೆನ್ಸ್ ಮುಕ್ಕುಝಿ ಭಾಗವಹಿಸಲಿದ್ದಾರೆ.