ಮಂಗಳೂರು ಏರ್ ಪೋರ್ಟ್ ಗೋಡೆ ಬಿರುಕು; ಸಂಸದ ನಳಿನ್ ಭೇಟಿ
ಮಂಗಳೂರು: ಮಳೆಯಿಂದಾಗಿ ಹಾನಿಗೊಳಗಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ಇವರೊಂದಿಗೆ ಗುರುವಾರ ಭೇಟಿ ನೀಡಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಹೊರಬಾಗದ ಕೊಳಂಬೆ ವಿಟ್ಟಲಬೆಟ್ಟು ಸಮೀಪ ಬೃಹತ್ ತಡೆಗೋಡೆಯಲ್ಲಿ ಬಿರುಕು ಉಂಟಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ವಿಮಾಣ ನಿಲ್ದಾಣ ಪ್ರಾಧಿಕಾರದ ವತಿಯಿಂದ ದುರಸ್ತಿ ಕೆಲಸ ಬುಧವಾರ ಆರಂಭಿಸಿದ್ದು, ಸಂಸದರು ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ನಡೆಸಲು ಸಂಸದರು ನಿರ್ದೇಶನ ನೀಡಿದರು.