ಮಂಗಳೂರು: ಐಎನ್ ಎಸ್ ವಿರಾಟ್ ಹಡಗನ್ನು ಏರ್ ಕ್ರಾಫ್ಟ್ ವಸ್ತು ಸಂಗ್ರಹಾಲಯವನ್ನಾಗಿ ನಿರ್ಮಿಸಲು ಜಿಲ್ಲಾಡಳಿತ ಚಿಂತನೆ

Spread the love

ಮಂಗಳೂರು: ಭಾರತೀಯ ನೌಕಪಡೆಯಲ್ಲಿ ಸೇವೆ ಸಲ್ಲಿಸಿರುವ ಐಎನ್ ಎಸ್ ವಿರಾಟ್ ಹಡಗನ್ನು ಏರ್ ಕ್ರಾಫ್ಟ್ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ ಎಂದು ದಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದ್ದಾರೆ

1-dc-press-20150721

 ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತೀಯ ನೌಕಪಡೆಯ ರೇರ್ ಅಡ್ಮಿರಲ್ ಎಸ್ ಎಸ್ ಘೋರ್ಮಡೆ ಇವರು ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಕೌಶಿಕ್ ಮುಖರ್ಜಿಯವರಿಗೆ ಪತ್ರ ಬರೆದ್ದಿದ್ದು, ಮಂಗಳೂರು ಒಂದು ಉತ್ತಮ ಪ್ರದೇಶವಾಗಿದ್ದು 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಜಿಲ್ಲೆಯಲ್ಲಿದೆ. ರಸ್ತೆ ರೈಲು, ವಿಮಾನ ಹಾಗೂ ಜಲ ಸಾರಿಗೆಗೆ ಉತ್ತಮ ಅವಕಾಶವನ್ನು ಹೊಂದಿದ್ದು ವಿಶ್ವದ ಎಲ್ಲಾ ಸ್ಥಳಗಳನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಹೊಂದಿದೆ. ಆದ್ದರಿಂದ ಸದ್ರಿ ಹಡಗಿಗೆ ಭಾರತೀಯ ನೌಕಾಪಡೆಯಲ್ಲಿ ಅಪ್ರತಿಮ ಸ್ಥಾನವಿದ್ದು, ಇದು ಸೇವೆಯನ್ನು ಕೊನೆಗೊಳಿಸಿದ ನಂತರ ಇದನ್ನು ವಸ್ತುಸಂಗ್ರಹಾಲಯವನ್ನಾಗಿ ಪರವರ್ತಿಸಿ ಸಾರ್ವಜನಿಕ ವೀಕ್ಷಣೆಗೆ ಹಾಗೂ ಮುಂದಿನ ಪೀಳಿಗೆಗಾಗಿ ಇದನ್ನು ಏರ್ ಕ್ರಾಫ್ಟ್ ಕ್ಯಾರಿಯರ್ ಮ್ಯೂಸಿಯಂ ಆಗಿ ಸ್ಥಾಪನೆ ಮಾಡುವ ಕುರಿತು ಚಿಂತನೆ ನಡೆಸಲಾಗಿದ್ದು ಸರಕಾರಕಾರದ ಅಭಿಪ್ರಾಯವನ್ನು ಕೇಳಲಾಗಿದೆ ಎಂದರು.

ಮಂಗಳೂರು ಬಂದರು 2000 ಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಉತ್ತಮ ನೌಕಾದಳದ ಅಭಿವೃದ್ದಿಗೆ ಪೂರಕವಾಗಿದೆ. ಇಂತಹುದೆ ಚಿಕ್ಕ ನೌಕಾ ಮ್ಯೂಸಿಯಂ ಅನ್ನು ಕಾರವಾರದಲ್ಲಿ ನಿರ್ಮಿಸಿದ್ದು, ಸಬ್ ಮೆರೈನ್ ಶಿಪ್ ಮ್ಯೂಸಿಯಂ ಆಂದ್ರಪದೇಶದ ವಿಶಾಖಪಟ್ಟಣದಲ್ಲಿ ಕೂಡ ನಿರ್ಮಿಸಲಾಗಿದೆ. 2016ರಲ್ಲಿ ಸೇವೆಯನ್ನು ನಿಲ್ಲಿಸುವ ಐಎನ್ ಎಸ್ ವಿರಾಟ್ ನೌಕೆಯನ್ನು ಮಂಗಳೂರಿನಲ್ಲಿ ಮ್ಯೂಸಿಯಂ ಆಗಿ ಪರಿವರ್ತಿಸಲು ಅವಕಾಶ ಕೋರಲಾಗುವುದು ಎಂದರು.

ಇದರ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಸದ್ಯದಲ್ಲಿಯೇ ಗುರುತಿಸಲಾಗದ್ದು ಅದು ಅಸಾಧ್ಯವಾಗದರೆ ಬೆಂಗ್ರೆಯಲ್ಲಿ ನಿರ್ಮಿಸಲು ಚಿಂತಿಸಲಾಗಿದೆ.

ನೂತನ ಮ್ಯೂಸಿಯಂ ಸುಮಾರು 10000 ಚದರ ಅಡಿ ವಿಸ್ತಿರ್ಣವನ್ನು ಹೊಂದಿದ್ದು, ಇದರ ನಿರ್ವಹಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅಥವಾ ಸರಕಾರಿ ಇಲಾಖೆಗಳ ಮೂಲಕ ನಿರ್ವಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಈ ಮ್ಯೂಸಿಯಂ ನಿರ್ಮಿಸಲು ಪರವಾನಿಗೆ ನೀಡುವಂತೆ ಜಿಲ್ಲಾಡಳಿತ ವತಿಯಿಂದ ನೌಕಾದಳದ ಅಧಿಕಾರಿಗಳೂ ಮತ್ತು ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.


Spread the love