ಮಂಗಳೂರು: ಐಡಿಯಲ್ ಐಸ್ ಕ್ರೀಂ ರಾಷ್ಟ್ರೀಯ ಪ್ರಶಸ್ತಿಗಳ ಗರಿ

Spread the love

ಮಂಗಳೂರು: ಶ್ರೀ ಮುಕುಂದ್ ಕಾಮತ್‍ತವರ ನೇತೃತ್ವದ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಗ್ರೇಟ್ ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ ಸೀಜನ್ 5ರಲ್ಲಿ ತನ್ನ ಮೂರು ಅತ್ಯುತ್ತಮ ಫ್ಲೇವರ್‍ಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

20160213-ice-cream-4

ಫೆಬ್ರವರಿ 11. ರಂದು ಗುರ್ಗಾಂವ್‍ನ ಡಬಲ್ ಟ್ರೀ ಬೈ ಹಿಲ್ಡನ್ ಹೊಟೇಲ್‍ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ  94ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸಿದ್ದವು ಹಾಗೂ  500ಕ್ಕೂ ಹೆಚ್ಚಿನ ಬಗೆಯ ವೈವಿಧ್ಯಮಯ ಐಸ್ ಸ್ಕ್ರೀಂಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಈ ಸ್ಪರ್ಧೆಗಳಲ್ಲಿ ಐಡಿಯಲ್ ಐಸ್ ಕ್ರೀಂ ವೆನಿಲ್ಲಾ, ಚಾಕೋಲೆಟ್ ಹಾಗೂ ಮೋಸ್ಟ್ ಇನ್ನೋವೇಟಿವ್ ಎಂಬ 3 ವಿಭಾಗಗಳಲ್ಲಿ ಸ್ಪರ್ಧಿಸಿತ್ತು.

20160213-ice-cream-6

ಐಡಿಯಲ್ ಐಸ್ ಕ್ರೀಂ ಈ ಕೆಳಗಿನ 4 ಪ್ರಮುಖ ಪ್ರಶಸ್ತಿಗಳನ್ನು ಪಡೆದುಕೊಂಡಿತು.

– ಸ್ವಿಸ್ ಚಾಕೋಲೆಟ್- ಭಾರತದ ಅತ್ಯುತ್ತಮ ಚಾಕೋಲೆಟ್ ಐಸ್ ಕ್ರೀಂ ಪ್ರಶಸ್ತಿ ಹಾಗೂ ಚಾಕೋಲೆಟ್      ವಿಭಾಗದಲ್ಲಿ ಚಿನ್ನದ ಪದಕ.

– ಕ್ರೀಮಿ ವೆನಿಲ್ಲಾ- ವೆನಿಲ್ಲಾ ವಿಭಾಗದಲ್ಲಿ ಚಿನ್ನದ ಪದಕ.

– ಚಾಕೋ ಚಿಲ್ಲಿ- ಮೋಸ್ಟ್ ಇನ್ನೋವೇಟಿವ್ ವಿಭಾಗದಲ್ಲಿ ಕಂಚಿನ ಪದಕ.

ಇದು ವಿಶ್ವದ ಅತೀ ದೊಡ್ಡ ಐಸ್ ಕ್ರೀಂ ಸ್ಪರ್ಧೆಯಾಗಿದ್ದು ಐಸ್ ಕ್ರೀಂನಲ್ಲಿ ಪರಿಣತರಾದ ಪ್ರಖ್ಯಾತ ವಾಸ್ಕೊ ಡಿ ಸೋಜಾ ತೀರ್ಪುಗಾರರಾಗಿ ಆಗಮಿಸಿದ್ದರು ಹಾಗೂ ಮಾಸ್ಟರ್ ಶೆಫ್ ಕುನಾಲ್ ಕಪೂರ್‍ರವರು ಮುಖ್ಯಾತಿಥಿಗಳಾಗಿದ್ದರು.


Spread the love