ಮಂಗಳೂರು : ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

Spread the love

ಮಂಗಳೂರು : ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಮಂಗಳೂರು: ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಗರದ ಬಲ್ಮಠ ರೋಡ್ ಸಮೀಪ ನಡೆದಿದೆ.

ಕಾರ್ಮಿಕರನ್ನು ಬಿಹಾರ ಮೂಲದ ರಾಜ್ ಕುಮಾರ್ (18) ಮತ್ತು ಉತ್ತರ ಪ್ರದೇಶ ಮೂಲದ ಚಂದನ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕಾಗಿ  ಅಡಿಪಾಯ ಹಾಗೂ ತಡೆಗೋಡೆ ನಿರ್ಮಾಣ ಕಾರ್ಯದ ವೇಳೆ ಈ ಘಟನೆ ಸಂಭವಿಸಿದೆ. ನಿರ್ಮಾಣ ಕಾಮಗಾರಿಯ ಒಂದು ಪಾರ್ಶ್ವದಲ್ಲಿ ಈ ಇಬ್ಬರೂ ಕಾರ್ಮಿಕರು ತಳಪಾಯದ ಗೋಡೆಗೆ ವಾಟರ್‌ ಪ್ರೂಫಿಂಗ್ ರಾಸಾಯನಿಕ ಸಿಂಪಡಿಸುತ್ತಿದ್ದ ವೇಳೆ ಆ ಭಾಗದ ಮೇಲ್ಭಾಗದಿಂದ ಭೂ ಕುಸಿತ ಉಂಟಾಗಿ ಅಲ್ಲಿ ಕಟ್ಟಲಾಗಿದ್ದ ತರ್ಪಾಲ್ ಮೇಲೆ ಬಿದ್ದು ಇಬ್ಬರೂ ಮಣ್ಣಿನಡಿ ಸಿಲುಕಿದ್ದರು.‌

ರಾಜ್ ಕುಮಾರ್ ನನ್ನು ಮಣ್ಣಿ ನಡಿ ಯಿಂದ ರಕ್ಷಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಎನ್ ಡಿಆರ್ ಎಫ್, ಅಗ್ನಿಶಾಮಕ ದಳ ಹಾಗೂ ಪೋಲಿಸರಿಂದ ಮಣ್ಣಿನಡಿ ಸಿಲುಕಿರುವ ಚಂದನ್‌ ಕುಮಾರ್‌ ನ ರಕ್ಷಣಾ ಕಾರ್ಯ ನಡೆಯುತ್ತಿದೆ

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


Spread the love