Home Mangalorean News Kannada News ಮಂಗಳೂರು: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಮಂಗಳೂರು: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

Spread the love

ಮಂಗಳೂರು: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಮಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಕಟ್ಟಡ ಕಾರ್ಮಿಕರ ಅಖಿಲ ಭಾರತ ಮತ್ತು ರಾಜ್ಯಮಟ್ಟದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.

ಕಟ್ಟಡ ಕಾರ್ಮಿಕರಿಗೆ ಎರಡು ತಿಂಗಳಿನಿಂದ ಬಿಡುಗಡೆಯಾಗದ ಮಾಸಿಕ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. 2022 ರಿಂದ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಧನ ಸಹಾಯವನ್ನು ಹೈಕೋರ್ಟ್ ಆದೇಶದಂತೆ ಕೂಡಲೇ ನೀಡಬೇಕು. ನೋಂದಣಿ ನವೀಕರಣ ಸಮಸ್ಯೆಗಳನ್ನು ಇತ್ಯಾರ್ಥಪಡಿಸಲು ಕಲ್ಯಾಣ ಮಂಡಳಿ ಹಾಗೂ ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಯು. ಜಯಂತ್ ನಾಯಕ್, ಚಂದ್ರಹಾಸ ಪಿಲಾರ್ ದಿನೇಶ್ ಜಪ್ಪಿನಮೊಗರು, ಪಾಂಡುರಂಗ ಕೊಂಚಾಡಿ, ಜನಾರ್ದನ ಕುತ್ತಾರು, ವಸಂತಿ ಕುಪ್ಪೆಪದವು, ಯಶೋದಾ ಮಳಲಿ, ಜಯಶೀಲಾ ವಾಮಂಜೂರು , ರಾಮಚಂದ್ರ ಪಜೀರು, ರೋಹಿದಾಸ್ ಭಟ್ನಗರ, ಇಬ್ರಾಹಿಂ ಮದಕ, ಪ್ರವೀಣ್ ವಾಮಜೂರು, ಅಶೋಕ್ ಶ್ರೀಯಾನ್, ಅಶೋಕ್ ಸಾಲಿಯಾನ್, ಉಮೇಶ್ ಶಕ್ತಿನಗರ, ಶಶಿಧರ ಶಕ್ತಿನಗರ, ಮೋಹನ್ ಜಲ್ಲಿಗುಡ್ಡೆ ರಿಚರ್ಡ್ ಕ್ರಾಸ್ತ ಸುಧಾಕ‌ರ್ ಆಳ್ವಾ ತೊಕ್ಕೊಟ್ಟು ಪಾಲ್ಗೊಂಡಿದ್ದರು.


Spread the love

Exit mobile version