ಮಂಗಳೂರು: ಕಳ್ಳ ಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರ ದಾಳಿ; 900 ಲೀಟರ್ ಹುಳಿ ರಸ ವಶ

Spread the love

ಮಂಗಳೂರು: ಕಳ್ಳ ಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರ ದಾಳಿ; 900 ಲೀಟರ್ ಹುಳಿ ರಸ ವಶ

ಮಂಗಳೂರು: ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ ವಲಯದ ಅಬಕಾರಿ ಅಧಿಕಾರಿಗಳು 900 ಲೀಟರ್ ಹುಳಿ ರಸವನ್ನು ವಶಪಡಿಸಿಕೊಂಡಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಶೈಲಜಾ ಕೋಟೆ ರವರ ನಿರ್ದೇಶನದಂತೆ ಮಂಗಳೂರು ಉಪ ವಿಭಾಗ-1 ರ ಅಬಕಾರಿ ಡಿವೈಎಸ್ಪಿ ಶಿವಪ್ರಸಾದ್ ರವರ ನೇತೃತ್ವದಲ್ಲಿ ಉಪ ವಿಭಾಗ-1ರ ಅಬಕಾರಿ ಇನ್ಸ್ಪೆಕ್ಟರ್ ರಾದ ಸೀಮಾ,ರತ್ನಾಕರ್ ರೈ ,ಸಬ್ ಇನ್ಸ್ಪೆಕ್ಟರ್ ರಾದ ಪ್ರತಿಭಾ ಜಿ ಹಾಗೂ ಉಪ ವಿಭಾಗ 1 ರ ಎಲ್ಲಾ ಸಿಬ್ಬಂದಿಗಳೊಂದಿಗೆ ಪಾವೂರು ಪಂಚಾಯತ ವ್ಯಾಪ್ತಿಯ ಪಾವೂರು ಉಳಿಯ ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಸಾಮೂಹಿಕ ಅಬಕಾರಿ ದಾಳಿ ನಡೆಸಲಾಗಿ ಉಳಿಯ ಎಂಬಲ್ಲಿನ ಹೊಳೆ ಬದಿಯಲ್ಲಿ 2.5 ಲೀಟರ್ ಕಳ್ಳಭಟ್ಟಿ ಸಾರಾಯಿ, ಭಟ್ಟಿ ಸಾರಾಯಿ ತಯಾರಿಕೆ ಗಾಗಿ ದಾಸ್ತಾನಿಸಿರುವ 900ಲೀಟರ್ ಗಳಷ್ಟು ಹುಳಿ ರಸ,75ಕೆಜಿ ಬೆಲ್ಲಹಾಗೂ ಭಟ್ಟಿ ತಯಾರಿಸಲು ಉಪಯೋಗಿಸುವ ಸಲಕರಣೆಗಳು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಪ್ರೇಮ್ ಫೆರಾರೋ ಎಂಬಾತನ ವಿರುದ್ಧ ಈ ಸಂಬಂಧ ಪ್ರಕರಣವನ್ನು ದಾಖಲಿಸಿಲಾಗಿದೆ. ಮುಂದಿನ ತನಿಖೆಯನ್ನು ಮಂಗಳೂರು ದಕ್ಷಿಣ ವಲಯ-2 ರ ಅಬಕಾರಿ ಇನ್ಸ್ಪೆಕ್ಟರ್ ರತ್ನಾಕರ್ ರೈ ರವರು ನಡೆಸಲಿದ್ದಾರೆ.

 


Spread the love