Home Mangalorean News Kannada News ಮಂಗಳೂರು: ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಮಂಗಳೂರು: ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ಅಗತ್ಯವಿರುವ ಹುದ್ದೆಗಳಿಗೆ ಆರು ತಿಂಗಳ ಅವಧಿಗೆ ಸಂಪೂರ್ಣ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 12 ಸಾಯಂಕಾಲ 5ಗಂಟೆಯೊಳಗೆ ಅರ್ಜಿಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಸಲ್ಲಿಸತಕ್ಕದ್ದು ನಂತರ ಅಥವಾ ತಡವಾಗಿ ಬರುವ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಹುದ್ದೆಯ ವಿವರ
ಕಚೇರಿ ಸಹಾಯಕ/ ಗುಮಾಸ್ತ ಹುದ್ದೆ-1:  ಯಾವುದೇ ಪದವಿ ಗಣಕ ಯಂತ್ರದ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಕಾರ್ಯ ನಿರ್ವಹಿಸಲು ಕೌಶಲ್ಯ, ಉತ್ತಮ ವೇಗವಾಗಿ ಬೆರಳುಚ್ಚು ಮಾಡುವ ಪ್ರಾವಿಣ್ಯತೆ ಇರಬೇಕು, ಉಕ್ತಲೇಖನ ತೆಗೆದುಕೊಳ್ಳುವ ಮತ್ತು ದತ್ತಾಂಶವನ್ನು ನಮೂದಿಸುವ ಸಾಮಥ್ರ್ಯ ಕಡತಗಳ ನಿರ್ವಹಣೆ ಮತ್ತು ಪ್ರಕ್ರಿಯೆ ಜ್ಞಾನ ಹೊಂದಿರಬೇಕು. ಮಾಸಿಕ ವೇತನ 19,000/- ರೂಪಾಯಿ.

ಸ್ವಾಗತಕಾರರು, ದತ್ತಾಂಶ ನಿರ್ವಹಣಾಕಾರರು (ಬೆರಳಚ್ಚುಗಾರರು) ಹುದ್ದೆ-1:  ಯಾವುದೇ ಪದವಿ ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಮ್ಮೇಳನ ಕೌಶಲ್ಯವಿರಬೇಕು ಗಣಕಯಂತ್ರದ ಬಗ್ಗೆ ತಿಳುವಳಿಕೆ ಮತ್ತು ಕಾರ್ಯನಿರ್ವಹಿಸುವ ಕೌಶಲ್ಯ ಮತ್ತು ದತ್ತಾಂಶ ಸಂಸ್ಕರಣ ಸಾಮಥ್ರ್ಯ, ಕಲಿ ಕಮ್ಯುನಿಕೇಶನ್ ಕೆಲಸ ನಿರ್ವಹಿಸುವ ಸಾಮಥ್ರ್ಯವಿರಬೇಕು (ದೂರವಾಣಿಗಳು ಫ್ಯಾಕ್ಸ್ ಯಂತ್ರ ಸ್ವಿಚ್ ಬೋರ್ಡ್ ಗಳು ಇತ್ಯಾದಿ) ಉತ್ತಮ ವೇಗವಾಗಿ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮಾಡುವ ಪ್ರಾವೀಣ್ಯತೆ ಇರಬೇಕು, ಮಾಸಿಕ ವೇತನ 17,271/- ರೂಪಾಯಿ.

ಕಚೇರಿ ಜವಾನ್, ದಲಾಯತ್ ಹುದ್ದೆ-1:  ಮಾಸಿಕ ವೇತನ 15,202/- ರೂಪಾಯಿವಾಗಿರುತ್ತದೆ. ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು ಸ್ವಚ್ಛತೆ ಹಾಗೂ ಮುಖ್ಯಸ್ಥರ ನಿರ್ದೇಶಿಸುವ ಕೆಲಸಗಳನ್ನು ಮಾಡುವುದು ಕಚೇರಿ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಕಚೇರಿ ಭೇಟಿ ಮಾಡುವ ಕಕ್ಷೆಗಾರರೊಂದಿಗೆ ಸನ್ನಡತೆ ಮತ್ತು ಸಂವಹನ ಕೌಶಲ್ಯವಿರಬೇಕು.

ಅರ್ಜಿಗಳೊಂದಿಗೆ ಲಗತ್ತಿಸಬೇಕಾದ ದಾಖಲೆಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪ್ರತಿ ಪದವಿ ಅಂಕಪಟ್ಟಿ ಪ್ರತಿಗಳು, ಕಂಪ್ಯೂಟರ್ ಪ್ರಮಾಣ ಪತ್ರಗಳು, ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ತೆರ್ಗಡೆಯ ಅಂಕ ಪಟ್ಟಿಗಳ ಪ್ರತಿಗಳು (ಬೆರಳಚ್ಚುಗಾರು ಹುದ್ದೆಗೆ ಮಾತ್ರ ಅನ್ವಯ), ಆಧಾರ್ ಕಾರ್ಡ್ ಪ್ರತಿ ಇತ್ತೀಚಿನ ಪಾಸ್ ಪೆÇೀರ್ಟ್ ಅಳತೆ ಒಂದು ಭಾವಚಿತ್ರ.,

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಗಳಲ್ಲಿ ಅರ್ಜಿಗಳು ಲಭ್ಯವಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳ ಪ್ರತಿಗಳೊಂದಿಗೆ ನೊಂದಾಯಿತ ಅಂಚೆ ಮೂಲಕ ಸದಸ್ಯ ಕಾರ್ಯದರ್ಶಿಗಳು, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮಂಗಳೂರು- 575003 ಇಲ್ಲಿ ಡಿಸೆಂಬರ್ 12 ರೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version