Home Mangalorean News Kannada News ಮಂಗಳೂರು: ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ; ಎಬಿವಿಪಿಯಿಂದ ಪ್ರತಿಭಟನೆ

ಮಂಗಳೂರು: ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ; ಎಬಿವಿಪಿಯಿಂದ ಪ್ರತಿಭಟನೆ

Spread the love

ಮಂಗಳೂರು: ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಹಾಸ್ಟೆಲ್ ಸಹಾಯಕ ನಿರ್ದೇಶಕರ ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಗುರುವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿತು.

ಮೃತ ವಿದ್ಯಾರ್ಥಿಯನ್ನು ಮುಂಬೈ ನಿವಾಸಿ ಐರಿನ್ ಮೆಂಡೊನ್ಸಾ ಅವರ ಮಗ ನೊಯೆಲ್ ವಾಲ್ಲಿ ಮೆಂಡೊನ್ಸಾ (17) ಎಂದು ಗುರುತಿಸಲಾಗಿದೆ.

1-alloysius

ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ಮೂರು ದಿನಗಳ ಹಿಂದೆ ನೊಯೆಲ್ ಇತರ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡುವುದನ್ನು ನಿಲ್ಲಿಸಿದ್ದು, ಆತ ಬರೆದ ಮೂರು ಪುಟಗಳ ಡೆತ್ ನೋಟ್ ಇತರ ಸಹಪಾಠಿಗಳೊಂದಿಗೆ ತೋರಿಸಿದ್ದು, ಸಪ್ಟೆಂಬರ್ 30 ರಂದು ಸಂಜೆ 9.30 ಸುಮಾರಿಗೆ ಆತನ ಗೆಳೆಯರು ಆತನ ರೂಮಿನ ಬಾಗಿಲನ್ನು ಬಡಿದಾಗ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಕೂಡಲೇ ಸಹಪಾಠಿಗಳು ವಾರ್ಡನ್ ಅವರ ಗಮನಕ್ಕೆ ತಂದಾಗ ವೆಂಟಿಲೇಟಿರ್ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ ಎಂದರು. ಕೂಡಲೇ ವಾರ್ಡನ್ ಬಂದರು ಪೋಲಿಸರಿಗೆ ತಿಳಿಸಿದ್ದು, ಮೃತ ಶರೀರವನ್ನು ಕೆಳಗೆ ಇಳಿಸಿ ಪೊಸ್ಟ್ ಮಾರ್ಟಮ್ ಗೆ ಕಳುಹಿಸಲಾಯಿತು. ನೋಯೆಲ್ ಅವರ ತಾಯಿ ಮುಂಬಯಿನಲ್ಲಿ ವಾಸಿಸುತ್ತಿದ್ದು, ತಂದೆ ಗಲ್ಫ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಎಬಿವಿಪಿ ಕಾರ್ಯದರ್ಶಿ ನಿತೀಶ್ ಮಾತನಾಡಿ ಸಂಘಟನೆಯವರು ಹಾಸ್ಟೆಲಿನ ಸಹಾಯಕ ನಿರ್ದೇಶಕರನ್ನು ಸಂಪರ್ಕಮಾಡಲು ಪ್ರಯತ್ನಿಸುತ್ತಿದ್ದು ಅವರ ಮೊಬೈಲ್ ಸ್ವಿಚ್ಚ್ ಆಫ್ ಆಗಿದ್ದು, ಘಟನೆಯ ಕುರಿತು ಸಂಶಯವಿದೆ. ಮಾಹಿತಿಗಳ ಪ್ರಕಾರ ಸಹಾಯಕ ನಿರ್ದೇಶಕರು ನೊಯೆಲ್ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ತನಿಖೆಯಾಗಬೇಕು. ಹಾಸ್ಟೆಲ್ ವಾರ್ಡನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಪೋಲಿಸರು ಸರಿಯಾದ ಕ್ರಮಕೈಗೊಳ್ಳಲು ವಿಫಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.


Spread the love

Exit mobile version