ಮಂಗಳೂರು ಕೆಥಡ್ರಲ್ 450ನೇ ವರ್ಷದ ಸಂಭ್ರಮಾಚರಣೆ ಉದ್ಘಾಟನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ
ಮಂಗಳೂರು : ದಿ ಹೋಲಿ ರೋಸರಿ ಕೆಥಡ್ರಲ್, ಬೋಳಾರ ಇದರ 450ನೇ ವರ್ಷದ ಸಂಭ್ರಮಾಚರಣೆಯನ್ನು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ, ನವೆಂಬರ್ 18, ರವಿವಾರದಂದು ಉದ್ಘಾಟಿಸಲಿದ್ದಾರೆ. ಈ ಸಮಾರಂಭ ನಗರದ ರೊಸಾರಿಯೋ ಕೆಥಡ್ರಲ್ ಗ್ರೌಂಡ್‍ನಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ. ಡಾ. ಪೀಟರ್ ಪೌಲ್ ಸಲ್ದಾನ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ರೆ. ಡಾ. ಅಲೋಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರುಗಳು ಆತೀ ವಂ| ಮೋನ್ಸಿಂಜರ್ ಮ್ಯಾಕ್ಸಿಮ್ ನೊರೊನ್ಹಾ, ಕರ್ನಾಟಕ ಪ್ರಾಂತ್ಯದ ಪ್ರೊವಿನ್ಶಿಯಲ್ ರೆ. ಫಾ. ಸ್ಟೇನಿಸ್ಲಾಸ್ ಡಿ’ಸೋಜ ಎಸ್ ಜೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ನಗರಾಡಳಿತ ಸಚಿವ ಯು. ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಕರ್ನಾಟಕ ವೃತ್ತದ ಸಿಪಿಎಂಜಿ ಡಾ. ಚಾಲ್ರ್ಸ್ ಲೋಬೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರುಗಳಾದ ಭೋಜೇ ಗೌಡ, ಐವನ್ ಡಿ’ಸೋಜ, ಬಿ. ಎಂ. ಫಾರೂಖ್, ಮಂಗಳೂರು ಮೇಯರ್ ಭಾಸ್ಕರ್ ಕೆ, ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೋ, ಉದ್ಯಮಿ ಮತ್ತು ದಾನಿ ರೊನಾಲ್ಡ್ ಕೊಲಾಸೊ, ಪೋರ್ಟ್ ವಾರ್ಡ್ ಕಾರ್ಪೊರೇಟರ್ ಅಬ್ದುಲ್ ಲತೀಫ್, ಸುಪೀರಿಯರ್ ಜನರಲ್‍ಗಳಾದ ಅತಿ ವಂದನೀಯ ಸಿಸ್ಟರ್ ಮೇರಿ ಸುಶೀಲಾ ಎಸಿ ಹಾಗೂ ಅತಿ ವಂದನೀಯ ಸಿಸ್ಟರ್ ಸುಶೀಲಾ ಸಿಕ್ವೇರಾ ಯುಎಫ್‍ಎಸ್, ಡಯೊಸೀಸನ್ ಪ್ಯಾಸ್ಟೋರಲ್ ಪರಿಷದ್ ಕಾರ್ಯದರ್ಶಿ ಶ್ರೀ. ಎಂ. ಪಿ. ನೊರೊನ್ಹಾ ಇವರುಗಳು ಗೌರವಾನ್ವಿತ ಅತಿಥಿಗಳಾಗಿ ಹಾಜರಿರಲಿದ್ದಾರೆ.
ಬಲಿಪೂಜೆ ಆಚರಣೆ : ಉದ್ಘಾಟನಾ ಸಮಾರಂಭಕ್ಕಿಂತ ಮುನ್ನ ರೊಸಾರಿಯೋ ಕೆಥಡ್ರಲ್ ಗ್ರೌಂಡ್‍ನಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಬಲಿಪೂಜೆ ಆಚರಣೆಯ ಅಧ್ಯಕ್ಷತೆಯನ್ನು ಬೆಂಗಳೂರು ಆರ್ಚ್ ಬಿಷಪ್ ಅತಿ ವಂದನೀಯ ಡಾ. ಪೀಟರ್ ಮಚಾಡೋ ವಹಿಸಲಿದ್ದಾರೆ.
ಮಂಗಳೂರು ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ಅವರು ಧಾರ್ಮಿಕ ಪ್ರವಚನ ನೀಡಲಿದ್ದು, ನಿವೃತ್ತ ಬಿಷಪ್‍ರಾದ ಅತಿ ವಂದನೀಯ ಡಾ ಅಲೋಷಿಯಸ್ ಪೌಲ್ ಡಿಸೋಜ, ಹಾಗೂ ಇತರ ಬಿಷಪ್ ಹಾಗೂ ಧರ್ಮಗುರುಗಳು ಉಪಸ್ಥಿತರಿರಲಿದ್ದಾರೆ.
ಮೂರು ದಿನಗಳ ಧ್ಯಾನ ಮತ್ತು ಆರಾಧನೆ: ಹೋಲಿ ರೋಸರಿ ಕೆಥಡ್ರಲ್ ಇದರ 450ನೇ ವರ್ಷದ ಐತಿಹಾಸಿಕ ಸಂಭ್ರಮಾಚರಣೆಯ ಅಂಗವಾಗಿ ರೊಸಾರಿಯೋ ಕೆಥಡ್ರಲ್ ಗ್ರೌಂಡ್‍ನಲ್ಲಿ ನವೆಂಬರ್ 15, 16 ಹಾಗೂ 17ರಂದು ಸಂಜೆ 5ರಿಂದ 8 ಗಂಟೆಯ ತನಕ ಮೂರು ದಿನಗಳ ಕಾಲ ಧ್ಯಾನ ಮತ್ತು ಆರಾಧನೆ (ದೇವರ ಸ್ತುತಿ ಮತ್ತು ಪ್ರಾರ್ಥನೆ) ನಡೆಯಲಿದೆ ಎಂದು ಕೆಥೆಡ್ರಲಿನ ರೆಕ್ಟರ್ ಫಾ| ಜೆ.ಬಿ.ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.