Home Mangalorean News Kannada News ಮಂಗಳೂರು: ಕೇರಳ ರಾಜ್ಯದ ಲಾಟರಿಯ ಮೇಲೆ ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಕೇರಳ ರಾಜ್ಯದ ಲಾಟರಿಯ ಮೇಲೆ ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಮಂಗಳೂರು: ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಕಾಂಪ್ಲೆಕ್ಸ್ ಕಟ್ಟಡದ ಎದುರುಗಡೆಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಅದೃಷ್ಠದ ಆಟವಾಡಿಸುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

03-02-2015 ರಂದು ಸಂಜೆ ಮಂಗಳೂರು ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ವ್ಯಕ್ತಿಯೋರ್ವನು ಹಣವನ್ನು ಸಂಗ್ರಹಿಸಿ ಅದೃಷ್ಠದ ಆಟವಾದ ಕೇರಳ ರಾಜ್ಯದ ಲಾಟರಿಯ ಕೊನೆಯ ಮೂರು ಅಂಕೆಯ ಮೇಲೆ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ವರ್ತಮಾನದಂತೆ ಮಟ್ಕಾ ಆಟವನ್ನು ನಡೆಸುತ್ತಿದ್ದ

ಜೆರಾಲ್ಡ್ ಫೆರ್ನಾಂಡಿಸ್(42), ತಂದೆ: ದಿ: ಸಂತಾನ್ ಫೆರ್ನಾಂಡಿಸ್, ವಾಸ: ಸಿಕ್ವೇರಾ ಇಂಜಿನಿಯರಿಂಗ್ ಹಿಂದುಗಡೆ, ಕಂಕನಾಡಿ ಬೈಪಾಸ್ ರಸ್ತೆ, ಮಂಗಳೂರು.

ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ರೂ. 7,080 /- ನಗದು, ಮಟ್ಕಾ ಬರೆಯುವ ಚೀಟಿ, ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಶ್ರೀ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love

Exit mobile version