ಮಂಗಳೂರು: ಕೊವೀಡ್ 19 ಸೋಂಕಿನಿಂದ ಮಹಿಳೆ ಸಾವು – ಬಂಟ್ವಾಳದ ಖಾಸಗಿ ಕ್ಲಿನಿಕ್ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಭಾನುವಾರ ಮಂಗಳೂರಿನಲ್ಲಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಮಹಿಳೆಗೆ ಕೋವಿಡ್-19 ರೋಗದ ಲಕ್ಷಣಗಳು ಕಂಡುಬಂದರೂ ಯಾವುದೇ ರೀತಿಯಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡದ ಖಾಸಗಿ ಕ್ಲಿನಿಕ್ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 19 ರಂದು ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಮಹಿಳೆಯೊಬ್ಬರು ಕೋವಿಡ್ -19 ಕೋರೋನ ಸೊಂಕು ಖಾಯಿಲೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಮೃತಪಟ್ಟಿದ್ದರು
ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಮೃತರ ಗಂಡ ಮತ್ತು ಮಗನನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದಲ್ಲಿ ಮೃತರ ಗಂಡ ಮತ್ತು ಮಗ ಮೃತ ಮಹಿಳೆಯೊಂದಿಗೆ ಎಲ್ಲಿ ಪ್ರಯಾಣಿಸಿದ್ದಿರಿ ಎಂಬ ಬಗ್ಗೆ ವಿಚಾರಿಸಿದಾಗ ಮೃತ ಮಹಿಳೆ ನಿಮೋನಿಯ (ಶ್ವಾಸಕೋಶದ) ಖಾಯಿಲೆಯಿಂದ ಬಳಲುತ್ತಿದ್ದು. ಅವರಿಗೆ ಅನೇಕ ಕಡೆ ಚಿಕಿತ್ಸೆ ಕೊಡಿಸಿದರು ನಿಮೋನಿಯ ಖಾಯಿಲೆಯಿಂದ ಗುಣ ಮುಖವಾಗದೆ ಇದ್ದು. ಏಪ್ರಿಲ್ 15ರಂದು ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಡಾ! ಸದಾಶಿವ ಶೆಣೈ .ನವದುರ್ಗಾ ಕ್ಲಿನಿಕ್ ಕರೆದುಕೊಂಡು ಹೋಗಿರುತ್ತೇವೆ ಎಂದು ತಿಳಿಸಿರುತ್ತಾರೆ.
ಸದ್ರಿ ಡಾ! ಸದಾಶಿವ ಶೆಣೈಎರವರು ಕೆ.ಪಿ.ಎಮ್.ಇ ಕಾಯ್ದೆ ಪ್ರಕಾರ ಎಲ್ಲಾ ಸಾಂಕ್ರಾಮಿಕ ಖಾಯಿಲೆಗಳನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ನೀಡಬೇಕಾಗಿದ್ದು. ಸದ್ರಿ ಡಾ. ಸದಾಶಿವ ಶೈಣೈ ರವರು ನಾಲ್ಕು ದಿನಗಳ ಚಿಕಿತ್ಸೆಯನ್ನು ನೀಡಿ ರೋಗ ಉಲ್ಬಣಗೊಂಡರು ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ನಿರ್ದೆಶನ ನೀಡಿರುವುದಿಲ್ಲ, ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ.
ದೇಶದಾದ್ಯಂತ ತುರ್ತು ಘೋಷಿಸಿ ಪ್ರಾಣ ನಿರೋಧಕ ನಿರ್ಭಂಧದ ನಿಯಮವೆಂದು ತಿಳಿದು ಕೂಡ ಜವಾಬ್ದಾರಿಯುತ ವೈಧ್ಯಾಧಿಕಾರಿಯಾಗಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡದೆ ವೈಧ್ಯಾಕೀಯ ಸೇವೆಯಲ್ಲಿ ಕೋವಿಂಡ್ -19 ಕೋರೋನ ಸೋಂಕು ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ್ದರಿಂದ ಸದರಿ ಮಹಿಳೆಯು ಕೋವಿಂಡ್ 19 ಕೋರೋನ ಸೊಂಕಿನಿಂದ ಮೃತಪಡುವರೇ ಕಾರಣವಾಗಿದ್ದು. ಅದ್ದುದರಿಂದ ಕೋವಿಂಡ್ -19 ಕೋರೋನ ಸೋಂಕು ಸಾಂಕ್ರಮಿಕ ಖಾಯಿಲೆ ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ ನವದುರ್ಗಾ ಕ್ಲಿನಿಕ್ ನ ಡಾ! ಸದಾಶಿವ ಶೆಣೈರವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 20 ರಂದು ತಾಲೂಕು ಆರೋಗ್ಯಧಿಕಾರಿಗಳು ಬಂಟ್ವಾಳ ತಾಲೂಕುರವರು ನೀಡಿದ ದೂರಿನಂತೆ ಕಲಂ : 269, 270, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ