Home Mangalorean News Kannada News ಮಂಗಳೂರು: ಕೋಕೆನ್ ಸಹಿತ ಮೂವರು ಆರೋಪಿಗಳು ಸೆರೆ

ಮಂಗಳೂರು: ಕೋಕೆನ್ ಸಹಿತ ಮೂವರು ಆರೋಪಿಗಳು ಸೆರೆ

Spread the love

ಮಂಗಳೂರು: ಕೋಕೆನ್ ಸಹಿತ ಮೂವರು ಆರೋಪಿಗಳು ಸೆರೆ

ಮಂಗಳೂರು: ನಗರದ ಸಾರ್ವಜನಿಕರಿಗೆ ಮಾದಕ ವಸ್ತು ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ ಆಯಂಡ್ ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಬಂಧಿತರನ್ನು ಪಳ್ನೀರ್ ನಿವಾಸಿ ಫಾಸೀಮ್ ನೌಷಿಬ್ (25), ಮಂಜೇಶ್ವರ ಕುಂಜೆತ್ತೂರು ನಿವಾಸಿ ಅಫ್ಝಲ್ ಹುಸೈನ್ (28), ಫಳ್ನೀರ್ ನಿವಾಸಿ ಝಾಹಿದ್ (26) ಎಂದು ತಿಳಿದುಬಂದಿದೆ.

ಕಂಕನಾಡಿ ಜಂಕ್ಷನ್ ರೈಲ್ವೇ ಸಿಬ್ಬಂದಿಗಳ ಸ್ಟಾಪ್ ಕ್ವಾಟ್ರಸ್ ಬಳಿಯಿಂದ ಕಾರು ಸಹಿತ ವಶಕ್ಕೆ ಪಡೆದುಕೊಂಡು ಅವರಿಂದ ಸುಮಾರು 30 ಗ್ರಾಂ ತೂಕದ 2,40,000 ರೂ. ಮೌಲ್ಯದ ಕೋಕೆನ್ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿತರಿಂದ ಮೊಬೈಲ್ ಫೋನ್-4 ನ್ನು, ಹಾಗೂ ಮಾರುತಿ ಕಂಪೆನಿಯ ಸ್ವೀಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 10,000,00/-ಆಗಿರುತ್ತದೆ. ಈ ಬಗ್ಗೆ ಇಕನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುವಿನ ಮಾರಾಟದ ಜಾಲದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ .

 ಪೊಲೀಸ್ ಆಯುಕ್ತರಾದ  ಡಾ. ಪಿ.ಎಸ್. ಹರ್ಷ, ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿ.ಎಸ್.ಐ ಕಬ್ಬಾಳ್ ರಾಜ್, ಸಿಸಿಬಿ ಘಟಕ ಸಿಬ್ಬಂದಿಗಳು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯ ಮಹಿಳಾ ಪಿ.ಎಸ್.ಐ ಶ್ರೀಮತಿ ಲತಾ ಮತ್ತು ಅವರ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Exit mobile version