ಮಂಗಳೂರು : ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅವಕಾಶ
ಮಂಗಳೂರು : ಸೆಪ್ಟಂಬರ್-2020ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಕೋವಿಡ್-19 ದೃಢಪಟ್ಟಿದ್ದ್ಟು ಮನೆಯಲ್ಲಿ ಐಸೋಲೇಶನ್ಯಿದ್ದು ಪರೀಕ್ಷೆ ಬರೆಯಲು ಅಪೇಕ್ಷಿಸಿದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ವೈಧ್ಯಾಧಿಕಾರಿಗಳ ಅನುಮತಿ ಪತ್ರವನ್ನು ಪಡೆದುಕೊಂಡು ಸಲ್ಲಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಗುರುತಿಸಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ಅಂತಹ ವಿದ್ಯಾರ್ಥಿಗಳು ಇದ್ದಲ್ಲಿ ಈ ಕೆಳಗಿನ ತಾಲೂಕುವಾರು ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೆಪ್ಟೆಂಬರ್ 19 ರೊಳಗೆ ನೊಂದಾಯಿಸಬೇಕು.
ಸಂಪರ್ಕಿಸಬಹುದಾದ ನೋಡಲ್ ಅಧಿಕಾರಿಗಳ ವಿವರ ಇಂತಿವೆ: ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿ – ಸುಶೀಲ, ದೂರವಾಣಿ ಸಂಖ್ಯೆ: 9741131138, ಬೆಳ್ತಂಗಡಿ ತಾಲೂಕು ನೋಡಲ್ ಅಧಿಕಾರಿ- ದಿನೇಶ, ದೂರವಾಣಿ ಸಂಖ್ಯೆ: 9632543262, ಮಂಗಳೂರು ಉತ್ತರ ತಾಲೂಕು ನೋಡಲ್ ಅಧಿಕಾರಿ – ಲಲಿತ ಕೆ, ದೂರವಾಣಿ ಸಂಖ್ಯೆ ಖ್ಯೆ:9741131138, ಮಂಗಳೂರು ದಕ್ಷಿಣ ತಾಲೂಕು ನೋಡಲ್ ಅಧಿಕಾರಿ- ಜ್ಯೋತಿ, ದೂರವಾಣಿ ಸಂಖ್ಯೆ: 9448823822, ಮೂಡಬಿದಿರೆ ತಾಲೂಕು – ನೋಡಲ್ ಅಧಿಕಾರಿ ಶಿವಾನಂದ ದೂರವಾಣಿ ಸಂಖ್ಯೆ: 9741131138, ಪುತ್ತೂರು ತಾಲೂಕು ನೋಡಲ್ ಅಧಿಕಾರಿ- ಹರಿಪ್ರಸಾದ್ ದೂರವಾಣಿ ಸಂಖ್ಯೆ:9901402398, ಸುಳ್ಯ ತಾಲೂಕು – ನೋಡಲ್ ಅಧಿಕಾರಿ ಲಕ್ಷ್ಮೀಶ ದೂರವಾಣಿ ಸಂಖ್ಯೆ:9741131138.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಈ ಅವಕಾಶ ಇರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.