ಮಂಗಳೂರು – ಖಾಸಗಿ ಬಸ್ ಗಳಲ್ಲಿ ಚಾಲನೆ ವೇಳೆ ಬಾಗಿಲು ಮುಚ್ಚವುದು ಕಡ್ಡಾಯ – ಇಂದಿನಿಂದಲೇ ಜಾರಿ

Spread the love

ಮಂಗಳೂರು – ಖಾಸಗಿ ಬಸ್ ಗಳಲ್ಲಿ ಚಾಲನೆ ವೇಳೆ ಬಾಗಿಲು ಮುಚ್ಚವುದು ಕಡ್ಡಾಯ – ಇಂದಿನಿಂದಲೇ ಜಾರಿ

ಮಂಗಳೂರು: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್ ಬಿಟ್ಟು ಉಳಿದ ಎಲ್ಲಾ ಸಾರಿಗೆ ಬಸ್ ಗಳು ಸಂಚಾರದ ಸಂದರ್ಭ ಬಾಗಿಲು ಮುಚ್ಚಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸಿಟಿ ಬಸ್ ಹೊರತುಪಡಿಸಿ ನಗರದಿಂದ ಹೊರಡುವ ಎಲ್ಲ ಸಾರಿಗೆ ಬಸ್‌ಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳ ಬಾಗಿಲು ಮುಚ್ಚುವ ಕ್ರಮವನ್ನು ಬುಧವಾರದಿಂದಲೇ ಜಾರಿಗೊಳಿಸಬೇಕು. ಬಾಗಿಲು ಇಲ್ಲದ ಬಸ್‌ಗಳಿಗೆ ಡಿ.10ರ ಒಳಗಾಗಿ ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು ಎಂದು ಸೂಚಿಸಿದರು.


Spread the love