ಮಂಗಳೂರು ಗೀತಾಂಜಲಿಯಲ್ಲಿ ಎಂಎಂಸಿಎ ವತಿಯಿಂದ ಕಲಾಸಂಗಮ ಸಾಂಸ್ಕøತಿಕ ಕಾರ್ಯಕ್ರಮ
ಮಂಗಳೂರು ಮ್ಯೂಸಿಕಲ್ & ಕಲ್ಚರಲ್ ಅಸೋಸಿಯೇಶನ್(ಎಂಎಂಸಿಎ) ವತಿಯಿಂದ ಲೋವರ್ ಬೆಂದೂರ್ನಗೀತಾಂಜಲಿಯಲ್ಲಿ 2018ರ ನವೆಂಬರ್ 17ರಂದು ಶನಿವಾರ “ಕಲಾಸಂಗಮ-2018” ಎಂಬ ಸಾಂಸ್ಕøತಿಕ ಸ್ಪರ್ಧಾ ಸರಣಿ ಹಮ್ಮಿಕೊಳ್ಳಲಾಗಿತ್ತು. ಕಳೆದ ಕೆಲ ದಿನಗಳಲ್ಲಿ ವಿವಿಧ ಕಲಾಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಫೈನಲ್ಸ್ ನವೆಂಬರ್ 17ರಂದು ನಡೆಯಿತು.
ಗುಡ್ ಶೆಫರ್ಡ್ ಸಿಲ್ವರ್ ಜುಬಿಲಿ ಪುರಸ್ಕಾರವನ್ನು ಸಂಸ್ಥೆಯ ಪರವಾಗಿ ಬಿಷಪ್ಎಮಿರಿಟಸ್ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿ\ಸೋಜಅವರಿಗೆ ನೀಡಿ ಸನ್ಮಾನಿಸಲಾಯಿತು.
ಎಂಎಂಸಿಎ ವತಿಯಿಂದ “ಸರ್ವೀಸ್ ವಿದ್ ಸ್ಮೈಲ್” ಪ್ರಶಸ್ತಿಯನ್ನು ಲಿಡಿಯಾಡಿಸೋಜಾ ಮತ್ತುಇರೆನ್ ಸೆರಾವೊಅವರಿಗೆ ನೀಡಲಾಯಿತು.ಕಲಾರತ್ನ ಪ್ರಶಸ್ತಿ (ಸ್ವರೂನ್ಸ್ಮರಣಾಂಜಲಿ)ಯನ್ನು ಮೋಹನ್ರಾಜ್ಅವರಿಗೆ, ಎಂಎಂಸಿಎ ಗಾರ್ಡಿಯನ್ಏಜೆಂಲ್ ಪ್ರಶಸ್ತಿಯನ್ನು ಶೋನಾ ಮೊಂತೆರೊಅವರಿಗೆ, ಬಂಧುತ್ವ ಮಾನವ ಸಂಬಂಧ ಪ್ರಶಸ್ತಿಯನ್ನು ಎ.ಎಂ.ನರಹರಿ ಮತ್ತುಉದಯಕುಮಾರ್ಅವರಿಗೆ ನೀಡಲಾಯಿತು.
ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆ ನೀಡಿ, ಅವರ ವ್ಯಕ್ತಿತ್ವರೂಪಿಸುವಲ್ಲಿಗಣನೀಯ ಸಾಧನೆತೋರಿದ ಸರ್ಎಂ.ರೋಶನ್ಅವರಿಗೆ ಮೆರಿಟೋರಿಯಸ್ ಸರ್ವೀಸಸ್ ಪ್ರಶಸ್ತಿ ನೀಡಿಗೌರವಿಸಲಾಯಿತು. ಕ್ಯಾಪ್ಟನ್ ಹಗ್ ವಾಸ್ ಮತ್ತುದೊರೊಂತಿ ವಾಸ್, ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತು ಫಿಲೋಮಿನಾ ಲೋಬೊ ಅವರಿಗೆ “ಗುಡ್ ಸಮರಿಥಾನ್” ದಂಪತಿ ಪ್ರಶಸ್ತಿ ನೀಡಲಾಯಿತು.
ವಿವಿಧ ಶಾಲೆಗಳ ಮಕ್ಕಳು ಪ್ರೇಕ್ಷಕರನ್ನು ವರ್ಣರಂಜಿತ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮುದಗೊಳಿಸಿದರು.
ಬಿಷಪ್ಎಮಿರಿಟಸ್ ಡಾ.ಅಲೋಶಿಯಸ್ ಪಾಲ್ಡಿಸೋಜಾ, ಸೆಂಟ್ಜೋಸೆಫ್ಎಂಜಿನಿಯರಿಂಗ್ಕಾಲೇಜಿನ ನಿರ್ದೇಶಕ ಫಾದರ್ ವಿಲ್ಫ್ರೆಡ್ ಪ್ರಕಾಶ್ಡಿಸೋಜಾ, ಫಾದರ್ ಪಿಯೂಸ್ಡಿಸೋಜಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.