Home Mangalorean News Kannada News ಮಂಗಳೂರು ಗೋಲಿಬಾರ್- ಫೆ.19 ರವರೆಗೆ ವಿಡಿಯೋ ತುಣುಕು, ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ

ಮಂಗಳೂರು ಗೋಲಿಬಾರ್- ಫೆ.19 ರವರೆಗೆ ವಿಡಿಯೋ ತುಣುಕು, ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ

Spread the love

ಮಂಗಳೂರು ಗೋಲಿಬಾರ್- ಫೆ.19 ರವರೆಗೆ ವಿಡಿಯೋ ತುಣುಕು, ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 2019 ಡಿಸೆಂಬರ್ 19 ರಂದು ನಡೆದ ಘಟನೆಯ ಬಗ್ಗೆ ಮ್ಯಾಜಿಸ್ಟಿರಿಯಲ್ ವಿಚಾರಣೆ ನಡೆಸಲು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಇವರನ್ನು ನೇಮಿಸಲಾಗಿದೆ.

ಈ ಸಂಬಂಧ 2019 ಡಿಸೆಂಬರ್ 19 ರಂದು ನಡೆದ ಘಟನೆ ಬಗ್ಗೆ ಯಾವುದೇ ಸಾರ್ವಜನಿಕರು ಹಾಗೂ ಪತ್ರಿಕೆ/ವಾರ್ತಾ ಮಾಧ್ಯಮದವರ ಬಳಿ ವಿಡಿಯೋ ತುಣುಕುಗಳು ಇದ್ದಲ್ಲಿ ಅಂತಹವರು ಅದನ್ನು 2020 ಫೆಬ್ರವರಿ 13ರಂದು ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸುವಂತೆ ಫೆಬ್ರವರಿ 6 ರ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ.

ಆದರೆ ಫೆಬ್ರವರಿ 13 ರಂದು ಕರ್ನಾಟಕ ಬಂದ್ ಇದ್ದ ಕಾರಣ ಸಿಸಿಟಿವಿ ಪೂಟೇಜ್ ಮತ್ತು ವೀಡಿಯೋ ಪೂಟೇಜ್‍ಗಳನ್ನು ವಿಚಾರಣೆಗೆ ಹಾಜರುಪಡಿಸಲು ಅಡಚಣೆ ಉಂಟಾಗಿದ್ದಲ್ಲಿ, ಇವುಗಳನ್ನು ಫೆಬ್ರವರಿ 19 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love

Exit mobile version