ಮಂಗಳೂರು ಗೋಲಿಬಾರ್ : ಸಾಕ್ಷ್ಯ / ಹೇಳಿಕೆ ನೀಡಲು ಅಂತಿಮ ಅವಕಾಶ
ಮಂಗಳೂರು : ಮಂಗಳೂರಿನಲ್ಲಿ 2019 ಡಿಸೆಂಬರ್ 19ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿನಿಂದ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ, ಇವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಸದ್ರಿ ದಿನ ಈ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕಿಗಳು ಫೆಬ್ರವರಿ 6ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಹ್ನ 1 ಗಂಟೆವರೆಗೆ ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು, ಇಲ್ಲಿಗೆ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶ ನೀಡಲಾಗಿದೆ. ತದನಂತರ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಇವರ ಪ್ರಕಟಣೆ ತಿಳಿಸಿದೆ.