Home Mangalorean News Kannada News ಮಂಗಳೂರು- ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ – ಇಲ್ಲಿದೆ ವಿವರ

ಮಂಗಳೂರು- ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ – ಇಲ್ಲಿದೆ ವಿವರ

Spread the love

ಮಂಗಳೂರು- ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ – ಇಲ್ಲಿದೆ ವಿವರ

ಮಂಗಳೂರು: ಮಂಗಳೂರು ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಮಂಗಳೂರು ಗೋವಾ ವಂದೇ ಭಾರತ್ ರೈಲಿನ ಆರಂಭದೊಂದಿಗೆ ಕರ್ನಾಟಕದಲ್ಲಿ ನಾಲ್ಕನೇ ವಂದೇ ಭಾರತ್ ರೈಲು ಕಾರ್ಯಾರಂಭ ಮಾಡಿದಂತಾಗಲಿದೆ.

ಮಂಗಳೂರು ಗೋವಾ ವಂದೇ ಭಾರತ್ ವೇಳಾಪಟ್ಟಿ
ಮಂಗಳೂರು ಗೋವಾ ವಂದೇ ಭಾರತ್ ಸೂಪರ್ ಫಾಸ್ಟ್ ರೈಲು ಮಂಗಳೂರಿನಿಂದ ಕೇವಲ 4.15 ಗಂಟೆ ಅವಧಿಯಲ್ಲಿ ಗೋವಾ ತಲುಪಲಿದೆ. ಈ ರೈಲು ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ.

ಮಂಗಳೂರಿನಿಂದ ಬೆಳಗ್ಗೆ 8.30 ಕ್ಕೆ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ 1.15 ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮತ್ತೆ ಸಂಜೆ ಮಡಗಾಂವ್ ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ತಲುಪಲಿದೆ.

ಈ ರೈಲಿಗೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ಕಡೆ ಮಾತ್ರ ನಿಲುಗಡೆ ಇರಲಿದೆ. ಇದು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ರೈಲಾಗಿದ್ದು, ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ಗಳ ವ್ಯವಸ್ಥೆ ಇದರಲ್ಲಿದೆ. ಆನ್ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಕೂಡ ರೈಲಿನಲ್ಲಿದೆ.

ಆನ್ಬೋರ್ಡ್ ವೈ-ಫೈ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಔಟ್ಲೆಟ್ಗಳು ಮತ್ತು ರೀಡಿಂಗ್ ಲೈಟ್ಗಳ ಸೌಲಭ್ಯ ಇದೆ. ಜತೆಗೆ ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಕೂಡ ಇವೆ.


Spread the love

Exit mobile version