Home Mangalorean News Kannada News ಮಂಗಳೂರು: ಗ್ರಾ.ಪಂ. ಚುನಾವಣೆ: ದ.ಕ: 10,202, ಉಡುಪಿ: 6,538 ನಾಮಪತ್ರ ಕ್ರಮಬದ್ದ; ನೀತಿ ಸಂಹಿತೆ ಉಲ್ಲಂಘಿಸದಿರಿ-...

ಮಂಗಳೂರು: ಗ್ರಾ.ಪಂ. ಚುನಾವಣೆ: ದ.ಕ: 10,202, ಉಡುಪಿ: 6,538 ನಾಮಪತ್ರ ಕ್ರಮಬದ್ದ; ನೀತಿ ಸಂಹಿತೆ ಉಲ್ಲಂಘಿಸದಿರಿ- ಜಿಲ್ಲಾಧಿಕಾರಿ

Spread the love
RedditLinkedinYoutubeEmailFacebook MessengerTelegramWhatsapp

ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆಗೆ ಸಲ್ಲಿಕೆಯಾದ ಒಟ್ಟು 10,261 ನಾಮಪತ್ರಗಳ ಪೈಕಿ 59 ನಾಮಪತ್ರಗಳು, ಉಡುಪಿ ಜಿಲ್ಲೆಯಲ್ಲಿ ಸಲ್ಲಿಕೆಯಾದ 6,665 ನಾಮಪತ್ರಗಳಲ್ಲಿ 43 ತಿರಸ್ಕೃತಗೊಂಡಿವೆ. ಮಂಗಳವಾರ ನಾಮಪತ್ರಗಳ ಪರೀಶೀಲನೆ ನಡೆದಿದ್ದು ಕ್ರಮವಾಗಿ ಒಟ್ಟು 10,202 ಮತ್ತು 6,538 ನಾಮಪತ್ರಗಳು ಕ್ರಮಬದ್ದವಾಗಿದೆ.

ಮಂಗಳೂರು ತಾಲೂಕಿನಲ್ಲಿ 2,949 (ತಿರಸ್ಕೃತ 17), ಬಂಟ್ವಾಳ-2,551 (16), ಬೆಳ್ತಂಗಡಿ-1,831 (9), ಪುತ್ತೂರು-1,858 (11), ಸುಳ್ಯ-1,013 (6), ಉಡುಪಿ-2,738 (16), ಕುಂದಾಪುರ-2,470 (18), ಕಾರ್ಕಳ 1,330 (9) ನಾಮಪತ್ರ ಸಿಂಧುವಾಗಿದೆ. ದ.ಕ.ದಲ್ಲಿ 227 ಗ್ರಾ.ಪಂ.ಗಳಲ್ಲಿ 3,399, ಉಡುಪಿಯ 155 ಗ್ರಾ.ಪಂ.ಗಳಲ್ಲಿ 2,398 ಸ್ಥಾನಗಳಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಬಳಿಕ ಅಂತಿಮ ಕಣದಲ್ಲಿರುವವರ ವಿವರ ಸಿಗಲಿದೆ.

ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ನಡೆಸುವುದು ಕಂಡು ಬಂದಲ್ಲಿ ಪ್ರಚಾರ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಂಡು ಅಭ್ಯರ್ಥಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಸಂಹಿತೆ ಮೇ 10 ಬೆಳಗ್ಗೆ 8 ಗಂಟೆಯಿಂದ ಜಾರಿಗೆ ಬಂದಿರುತ್ತದೆ. ಪಕ್ಷ ರಹಿತ ಚುನಾವಣೆಯಾಗಿರುವುದರಿಂದ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳ ಚಿಹ್ನೆ ಮತ್ತು ಮುಖಂಡರ ಭಾವಚಿತ್ರಗಳನ್ನು ಉಪಯೋಗಿಸಿಕೊಂಡು ಪ್ರಚಾರ ನಡೆಸುವುದು ಮತ್ತು ಕರಪತ್ರ, ಪೋಸ್ಟರ್‌ ಅಥವಾ ಅನ್ಯಾವುದೇ ಪ್ರಚಾರ ಸಾಧನಗಳನ್ನು ಬಳಸಿಕೊಂಡು ಪ್ರಚಾರ ನಡೆಸಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಆಯೋಗದ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version