ಮಂಗಳೂರು: ಶಿಕ್ಷಣ, ಸಾಹಿತ್ಯ, ಕಲೆ ಹಾಗೂ ಸಂಸ್ಕøತಿ ಕ್ಷೇತ್ರಗಳಲ್ಲಿ ವಿಶೇಷವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅರೆಹೊಳೆ ಪ್ರತಿಷ್ಠಾನದ ಕಲಾ ತಂಡ ‘ನಂದಗೋಕುಲ’ದ ವಾರ್ಷಿಕ ಕಲಾ ಪ್ರಶಸ್ತಿ ‘ನಂದಗೋಕುಲ ಕಲಾ ಪ್ರಶಸ್ತಿ-2016’ಕ್ಕೆ ಖ್ಯಾತ ನೃತ್ಯ ಕಲಾವಿದ-ಸಂಘಟಕ ಸುರತ್ಕಲ್‍ನ ಶ್ರೀ ಚಂದ್ರಶೇಖರ ನಾವುಡರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಕಲಾಶ್ರೀ ಚಂದ್ರಶೇಖರ ನಾವುಡರು, ಭರತನಾಟ್ಯ, ಯಕ್ಷಗಾನ, ಗಮಕ, ಗಾಯನ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದ ಸಾಧನೆಗಾಗಿ ಗೋವಿಂದದಾಸ ಕಾಲೇಜಿನ ನಿವೃತ್ತ ಗ್ರಂಥ ಪಾಲಕ ಶ್ರೀ ಬಾಲಕೃಷ್ಣ, ಖ್ಯಾತ ನೃತ್ಯ ಗುರು-ರಂಗಭೂಮಿ ಕಲಾವಿದೆ ಪುತ್ತೂರಿನ ಮಂಜುಳಾ ಸುಬ್ರಹ್ಮಣ್ಯ, ಕಿನ್ನಿಗೋಳಿಯ ಯುಗ ಪುರುಷದ ಭುವನಾಭಿರಾಮ ಉಡುಪ ಹಾಗೂ ಬಂಟ್ವಾಳದ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ಪ್ರೊ.ತುಕಾರಾಮ ಪೂಜಾರಿ ಯವರನ್ನು ಆಯ್ಕೆ ಮಾಡಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.
ಇದೇ ಜನವರಿ 24 ಬಾನುವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಅರೆಹೊಳೆ ಪ್ರತಿಷ್ಠಾನ-ನಂದಗೋಕುಲದ ವಾರ್ಷಿಕ ಕಾರ್ಯಕ್ರಮ ‘ಗಾನ ನಾಟ್ಯ ಪಯಣ-2016’ರ ಸಂದರ್ಭದಲ್ಲಿ ಲಯನ್ಸ್ ಮಾಜಿ ಗವರ್ನರ್, ಸಾಹಿತ್ಯ-ಕಲಾ ಪೋಷಕ ಹಾಗೂ ವಕೀಲರಾಗಿರುವ ಹಾಸನದ ಶ್ರೀ ಹೆಚ್ ಎಸ್ ಮಂಜುನಾಥ ಮೂರ್ತಿಯವರು ಪ್ರಶಸ್ತಿ ಪ್ರದಾನ ಹಾಗೂ ಸಂಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ದರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಪ್ರಕಟಣೆ ತಿಳಿಸಿದೆ.