Home Mangalorean News Kannada News ಮಂಗಳೂರು ಚಲೋ ಅನುಮತಿ ನಿರಾಕರಿಸಿದ ಸರ್ಕಾರ ತಾಕತ್ತಿದ್ದರೆ ಕಾರ್ಯಕ್ರಮ ತಡೆಯಲಿ : ನಳಿನ್ ಕುಮಾರ್ ಕಟೀಲ್

ಮಂಗಳೂರು ಚಲೋ ಅನುಮತಿ ನಿರಾಕರಿಸಿದ ಸರ್ಕಾರ ತಾಕತ್ತಿದ್ದರೆ ಕಾರ್ಯಕ್ರಮ ತಡೆಯಲಿ : ನಳಿನ್ ಕುಮಾರ್ ಕಟೀಲ್

Spread the love

ಮಂಗಳೂರು ಚಲೋ ಅನುಮತಿ ನಿರಾಕರಿಸಿದ ಸರ್ಕಾರ ತಾಕತ್ತಿದ್ದರೆ ಕಾರ್ಯಕ್ರಮ ತಡೆಯಲಿ : ನಳಿನ್ ಕುಮಾರ್ ಕಟೀಲ್  

ಮಂಗಳೂರು: ಮುಂದಿನ ಚುನಾವಣೆ ಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್  ಮಂಗಳೂರು ಚಲೋ ‌ಜಾಥಾಕ್ಕೆ ಅನುಮತಿ ನಿರಾಕರಿಸಿದೆ. ಆದರೆ ಬಿಜೆಪಿ ತನ್ನ ಕಾರ್ಯಕ್ರಮವನ್ನು ನಡೆಸಿಯೇ ಸಿದ್ದ ಸರ್ಕಾರಕ್ಕೆ ತಾಕತ್ತಿದ್ದರೆ ತಡೆಯಲಿ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸವಾಲೆಸಿದಿದ್ದಾರೆ.

ರಾಜ್ಯ ಸರಕಾರ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ , ಹಲ್ಲೆ ಪ್ರಕರಣದಲ್ಲಿ ಪಿ.ಎಫ್‌.ಐ. ಹಾಗೂ ಕೆ.ಎಫ್‌.ಡಿ. ಸಂಘಟನೆಯು ಭಾಗಿಯಾಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ “ಮಂಗಳೂರು ಚಲೋ’ ಬೈಕ್‌ ಜಾಥಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರ ಪೋಲಿಸ್ ಕಮೀಷನರ್ ಟಿ.ಆರ್. ಸುರೇಶ್ ಅವರು ಸೋಮವಾರ ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದರು.

ಕಮೀಷನರ್ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು  ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಹೋರಾಟ ನಡೆಸುವುದು ನಮ್ಮ ಹಕ್ಕು. ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸುವ ಮೂಲಕ ಹಕ್ಕು ಮೊಟಕು ಗೊಳಿಸುವ ಪ್ರಯತ್ನ ನಡೆಸಿದೆ.  ಬಿಜೆಪಿ ಆಯೋಜಿಸಿದ ನಿಯೋಜಿತ ಕಾರ್ಯಕ್ರಮಗಳು ಯಥಾಪ್ರಕಾರ ನಡೆಯಲಿದ್ದು ಸುಮಾರು 20 ಸಾವಿರಕ್ಕೂ ಅಧಿಕ ಬೈಕುಗಳು ಭಾಗವಹಿಸಲಿದೆ. ರಾಜ್ಯದ ಉದ್ದಗಲದಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ಕಾರ್ಯಕರ್ತರಿಗೆ ರಹಸ್ಯ ಸ್ಥಳದಲ್ಲಿ ತಂಗಲು ವ್ಯವಸ್ಥೆ ಮಾಡುತ್ತೇವೆ .ಪ್ರತಿಭಟನಾ ಜಾಥಾವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದವರು ಸ್ಪಷ್ಟಪಡಿಸಿದರು .


Spread the love

Exit mobile version