Home Mangalorean News Kannada News ಮಂಗಳೂರು: ಜವಾಹರ್ ಲಾಲ್ ನೆಹರೂ ಅವರ 60ನೇ ಪುಣ್ಯತಿಥಿ

ಮಂಗಳೂರು: ಜವಾಹರ್ ಲಾಲ್ ನೆಹರೂ ಅವರ 60ನೇ ಪುಣ್ಯತಿಥಿ

Spread the love

ಮಂಗಳೂರು: ಜವಾಹರ್ ಲಾಲ್ ನೆಹರೂ ಅವರ 60ನೇ ಪುಣ್ಯತಿಥಿ

ಮಂಗಳೂರು: ಜವಾಹರಲಾಲ್ ನೆಹರೂ ಅವರು 17 ವರ್ಷಗಳ ಕಾಲ ದೇಶವನ್ನು ಸಮರ್ಥವಾಗಿ ಮುನ್ನೆಡೆಸಿದ ಫಲವಾಗಿ ಇಂದು ಭಾರತ ಶೈಕ್ಷಣಿಕ, ತಾಂತ್ರಿಕ, ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಎ ಗಫೂರ್ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 60ನೇ ಪುಣ್ಯತಿಥಿ ಅಂಗವಾಗಿ ಸೋಮವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವನ್ನು ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದ್ದು ನೆಹರೂರವರು. ದೇಶದ ಇಂದಿನ ಪ್ರಗತಿಗೆ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಪಂಚವಾರ್ಷಿಕ ಯೋಜನೆ, ಕೈಗಾರಿಕೆ, ಕೃಷಿ, ನೀರಾವರಿ, ವಿಜ್ಞಾನ-ತಂತ್ರಜ್ಞಾನ, ವಿದೇಶಾಂಗ ನೀತಿ ಜಾರಿಗೆ ತಂದು ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಧಿವೃದ್ಧಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಅಶ್ರಫ್.ಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ಮುಂಚೂಣಿ ಜಿಲ್ಲಾಧ್ಯಕ್ಷರಾದ ಶಾಹುಲ್ ಹಮೀದ್, ಚೇತನ್ ಬೆಂಗ್ರೆ, ಡಿಸಿಸಿ ಉಪಾಧ್ಯಕ್ಷ ಟಿ.ಹೊನ್ನಯ್ಯ, ಮುಖಂಡರಾದ ಚಂದ್ರಹಾಸ ಕರ್ಕೇರ, ಮೊಹಮ್ಮದ್ ಕುಂಜತ್ತಬೈಲ್, ಟಿ.ಕೆ.ಸುಧೀರ್, ನಝೀರ್ ಬಜಾಲ್, ಕೆ.ಅಪ್ಪಿ, ವಿಕಾಸ್ ಶೆಟ್ಟಿ, ಸಬಿತಾ ಮಿಸ್ಕಿತ್, ಮಂಜುಳಾ ನಾಯಕ್, ಶಾಂತಲ ಗಟ್ಟಿ, ದಿನೇಶ್ ರಾವ್, ಉದಯ್ ಕುಂದರ್, ಜಯರಾಂ ಕಾರಂದೂರು, ವೋಸ್ ವಾಲ್ಡ್, ಮಕ್ಬೂಲ್ ಕುದ್ರೊಳಿ, ಯೋಗೀಶ್ ನಾಯಕ್, ಹೈದರ್ ಕೈರಂಗಳ, ಸಮರ್ಥ್ ಭಟ್, ಲಕ್ಷ್ಮಣ್ ಶೆಟ್ಟಿ, ರೋಬಿನ್ ಅಂಚನ್, ಹ್ಯಾರಿ ಡಿಸೋಜ, ಲ್ಯಾನ್ಸಿ ಲಸ್ರಾಡೊ, ರಿತೇಶ್ ಅಂಚನ್ ಉಪಸ್ಥಿತರಿದ್ದರು.

ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್ ಸ್ವಾಗತಿಸಿದರು. ಶಾಲೆಟ್ ಪಿಂಟೋ ವಂದಿಸಿದರು.


Spread the love

Exit mobile version