ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ದಾಳಿ; ಗಾಂಜಾ, ಮೊಬೈಲ್, ಸಿಮ್ ಪತ್ತೆ

Spread the love

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಧಾಳಿ; ಗಾಂಜಾ, ಮೊಬೈಲ್, ಸಿಮ್ ಪತ್ತೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಮಧ್ಯಾಹ್ನ ಪೊಲೀಸರು ದಿಢೀರ್‌ ತಪಾಸಣೆ ನಡೆಸಿದ್ದು, ಕೈದಿಗಳ ಬಳಿ‌ ಗಾಂಜಾ, ಮೊಬೈಲ್, ಸಿಮ್‌ ಕಾರ್ಡ್ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

20 ಅಧಿಕಾರಿಗಳು, 30 ಸಿಬ್ಬಂದಿ, ಮಹಿಳಾ ಸಿಬ್ಬಂದಿ ಇದ್ದ ತಂಡ ಕಾರ್ಯಾಚರಣೆ ನಡೆಸಿತು. ಕೈದಿಗಳಿರುವ ಎಲ್ಲ ಬ್ಯಾರಕ್ ಗಳಲ್ಲಿ ತಪಾಸಣೆ ನಡೆಸಲಾಗಿದೆ.

ಸುಮಾರು 250 ಗ್ರಾಂ. ಗಾಂಜಾ, ಬೀಡಿ ಕಟ್ಟುಗಳ, ಸಿಗರೇಟು, ಬೆಂಕಿಕಡ್ಡಿ ಪೊಟ್ಟಣಗಳು, ಕಟ್ಟರ್‌ಗಳು, ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love