Home Mangalorean News Kannada News ಮಂಗಳೂರು: ಜೆ ಎನ್ ಯು ಪ್ರತಿಭಟನೆಯಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ಸಮಾಜಘಾತುಕರನ್ನು ಬಂಧಿಸಿ; ಸೆಂಟ್ರಲ್...

ಮಂಗಳೂರು: ಜೆ ಎನ್ ಯು ಪ್ರತಿಭಟನೆಯಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ಸಮಾಜಘಾತುಕರನ್ನು ಬಂಧಿಸಿ; ಸೆಂಟ್ರಲ್ ಕಮಿಟಿ

Spread the love
RedditLinkedinYoutubeEmailFacebook MessengerTelegramWhatsapp

ಮಂಗಳೂರು: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆ. ಎನ್. ಯು.) ವಿದ್ಯಾರ್ಥಿಗಳ ನ್ಯಾಯೋಚಿತವಾದ ಪ್ರತಿಭಟನೆಯಲ್ಲಿ ಕೆಲವೊಂದು ಸಮಾಜಘಾತುಕ ಶಕ್ತಿಗಳ ಕಾರಣದಿಂದ ಭಾರತದ ವಿರೋಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಹಾಗೂ ಸಂವಿಧಾನಕ್ಕೆ ಕಳಂಕವನ್ನು ತಂದಿರುವ ಸಮಾಜಘಾತುಕರನ್ನು ಕೂಡಲೇ ಬಂಧಿಸಬೇಕಾಗಿ ಮಂಗಳೂರು ಸೆಂಟ್ರಲ್ ಕಮಿಟಿಯು ಆಗ್ರಹಿಸಿದೆ.
ಜೆ. ಎನ್. ಯು. ಪ್ರತಿಭಟನೆಗೆ ಎಲ್. ಇ. ಟಿ. ಯ ಕುಮ್ಮಕ್ಕು ಇದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ರಾಜನಾಥ ಸಿಂಗ್‍ರ ಹೇಳಿಕೆಯು ದುರ್ಬಲ ಹೇಳಿಕೆಯಾಗಿದ್ದು ಈ ಬಗ್ಗೆ ಅವರಲ್ಲಿ ಯಾವುದೇ ಸಾಕ್ಷ್ಯಾಧಾರಗಳಿದ್ದರೂ ಅವುಗಳನ್ನು ಬಹಿರಂಗಗೊಳಿಸಬೇಕೆಂದು ಸಂಘಟನೆಯ ಮುಖಂಡರಾದ ಅಲಿ ಹಸನ್, ಅಬ್ದುಲ್ ಅಜೀಜ್ ಹಾಗೂ ಯಾಸಿನ್ ಕುದ್ರೋಳಿಯವರು ಆಗ್ರಹಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version