ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಸಂಪರ್ಕ ಅಭಿಯಾನ ಉದ್ಫಾಟನೆ

Spread the love

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಸಂಪರ್ಕ ಅಭಿಯಾನ ಉದ್ಫಾಟನೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಬ್ಲಾಕ್ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ನಡೆಯಲಿರುವ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ  ಮುಹಮ್ಮದ್ ಅಕ್ಬರ್ ಆಲಿಂ ರವರು ತಾರೀಕು 16.03.2019 ರಂದು ಉದ್ಫಾಟಿಸಿದರು.

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಕೆಪಿಸಿಸಿಯ ನಿರ್ದೇಶನದಂತೆ ಪ್ರತಿಯೊಂದು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತಹ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ತಳಮಟ್ಟದಲ್ಲಿ ಸಂಘಟನೆ ಇದ್ದಲ್ಲಿ ಪಕ್ಷ ಬಲಿಷ್ಠವಾಗುತ್ತದೆ. ಪ್ರತಿಯೊಂದು ಮನೆಗೆ ತೆರಳಿ ರಾಜ್ಯ ಸರಕಾರದ ಸಾಧನೆಗಳನ್ನು ಜನತೆಗೆ ವಿವರಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ತಾವೆಲ್ಲರೂ ಕಠಿಣ ಶ್ರಮ ವಹಿಸಬೇಕೆಂದು ಹೇಳಿದರು.

ಮಾಜಿ ಶಾಸಕ ಜೆ.ಆರ್. ಲೋಬೊ ರವರು ಮಾತನಾಡುತ್ತಾ ಪಕ್ಷದ ಸಂಘಟನೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ತೊಡಗಿಸಿಕೊಳ್ಳುವುದು ಅತೀ ಅವಶ್ಯ. ಕೇಂದ್ರ ಸರಕಾರ ಆಡಳಿತದಲ್ಲಿ ಜನರು ಭ್ರಮನಿರಸನಗೊಂಡಿದ್ದಾರೆ. ಕಳೆದ ಚುನಾವಣೆ ಸಂದರ್ಭದ ಬಿಜೆಪಿಯವರು ಕೊಟ್ಟ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಇದು ನಾವೆಲ್ಲರೂ ಜನತೆಗೆ ಬೂತ್ ಮಟ್ಟದಲ್ಲಿ ತಿಳಿಸಬೇಕು ಎಂದರು.

ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್ ಹಾಗೂ ನಗರ ಬ್ಲಾಕ್ ಉಪಾಧ್ಯಕ್ಷ ಸುರೇಂದ್ರ ಶೆಣೈಯವರು ಸಂದರ್ಬೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ, ನವೀನ ಡಿ.ಸೋಜ, ಹಾಗೂ ಪಕ್ಷದ ಮುಖಂಡರುಗಳಾದ ಪ್ರಭಾಕರ ಶ್ರೀಯಾನ್, ಅಪ್ಪಿ, ವಿನಯರಾಜ್, ಟಿ.ಕೆ. ಸುಧೀರ್, ನೀರಜ್ ಪಾಲ್, ಖಾಲಿದ್ ಉಜಿರೆ, ಹೊನ್ನಯ್ಯ, ಬಿ.ಎಂ. ಭಾರತಿ, ಶೋಭಾ ಕೇಶವ, ಎ.ಸಿ. ಜಯರಾಜ್, ಆಶಿತ್ ಪಿರೇರಾ, ರಮಾನಂದ ಪೂಜಾರಿ, ಸಂಶುದ್ದೀನ್ ಕುದ್ರೋಳಿ, ವಹಾಬ್, ಭರತೇಶ್ ಅಮೀನ್, ಅಬೂಬಕ್ಕರ್, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು. ಸದಾಶಿವ ಅಮೀನ್ ಸ್ವಾಗತಿಸಿ, ಚೇತನ್ ಕುಮಾರ ವಂದಿಸಿದರು.


Spread the love