ಮಂಗಳೂರು:  ದಸರಾ ಅಲಂಕಾರ- ಅಕ್ರಮ ವಿದ್ಯುತ್ ಸಂಪರ್ಕ ಪಡೆದರೆ ಕಾನೂನು ಕ್ರಮ

Spread the love

ಮಂಗಳೂರು:  ದಸರಾ ಅಲಂಕಾರ- ಅಕ್ರಮ ವಿದ್ಯುತ್ ಸಂಪರ್ಕ ಪಡೆದರೆ ಕಾನೂನು ಕ್ರಮ

ಮಂಗಳೂರು:  ದಸರಾ ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿರುತ್ತದೆ ಹಲವಾರು ಸ್ಥಳಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಘ ಸಂಸ್ಥೆಗಳು ತಮ್ಮ ಅನಧಿಕೃತ ಫ್ಲೆಕ್ಸ್ ಮತ್ತು ಬಾನರ್ ಗಳನ್ನು ಅಳವಡಿಸಿದ್ದು, ಫ್ಲೆಕ್ಸ್ ಮತ್ತು ಬ್ಯಾನರ್ ಗಳಿಗೆ ಅಲಂಕಾರಿಕ ದೀಪಗಳು ಅಳವಡಿಸಲು ಪಾಲಿಕೆದಿಂದ ಅಳವಡಿಸಿರುವ ಕಂಬ ಮತ್ತು ವಿದ್ಯುತ್ ದೀಪಗಳ ಸಂಪರ್ಕದಿಂದ ಅತಿಕ್ರಮಣವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಕಂಡುಬರುತ್ತಿದೆ.

ಇಂತಹ ಅತಿಕ್ರಮಣ ಸಂಪರ್ಕಗಳಿಗೆ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಹಾಗೂ ಯಾವುದೇ ರೀತಿ ಅವಘಡಗಳನ್ನು ಸಂಭವಿಸಿದರೆ ನೇರ ಹೊಣೆಗಾರನಾಗಿ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love