ಮಂಗಳೂರು: ಮಂಗಳೂರು ನಗರ ಹೊರತು ಪಡಿಸಿ ಇದೇ ಮೊದಲ ಬಾರಿಗೆ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಢ ಶಾಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ನಾದ ವೃಧ್ಧಿಯ ದೂರದೃಷ್ಟಿವಿರಿಸಿ ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ತಮ್ಮ ಖಾತೆಯ ಅನುದಾನದಿಂದ “ಆಡಿಯೋ ವೀಷ್ಯುವಲ್ ರೂಂ”ನ್ನು ನಿರ್ಮಿಸುತ್ತಿದ್ದಾರೆ.
ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಢಶಾಲೆಗೆ ಭೇಟಿ ನೀಡಿದ ಸಚಿವ ಖಾದರ್ ಅವರು “ನೂತನ ಯೋಜನೆ ಆಡಿಯೋ ವೀಷ್ಯುವಲ್ ರೂಂ”ನ ಕಟ್ಟಡವನ್ನು ಪಂಚಾಯತ್‍ರಾಜ್ ಸಹಾಯಕ ಇಂಜಿನಿಯರ್ ನಿತಿನ್ ಜೊತೆ ಪರಿಶೀಲಿಸಿದರು.ನೇತಾಜಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುತ್ತಿದ್ದು,ಇಲ್ಲಿನ ಗ್ರಾಮೀಣ ಪ್ರದೇಶದ ಮಕ್ಕಳು ಮಾಹಿತಿ ತಂತ್ರಜ್ನಾದಲ್ಲೂ ಮುಂದುವರಿಯಬೇಕೆಂಬ ಮಹತ್ವಾಕಾಂಕ್ಷೆ ಸಚಿವರದ್ದಾಗಿದೆ.
ಮಂಗಳೂರಿನ ಮಣ್ಣಗುಡ್ಡೆಯಲ್ಲಿ “ದುಂಡು ಮೇಜಿನ ಸಂಸ್ಥೆಯವರು “ಮೊದಲ ಬಾರಿಗೆ ಈ ಯೋಜನೆ ಆರಂಭಿಸಿ ಸಚಿವ ಖಾದರ್ ಅವರಿಂದ ಲೋಕಾರ್ಪಣೆ ಮಾಡಿದ್ದರು. ಆವತ್ತೇ ಈ ಆಧುನಿಕ ತಂತ್ರಜ್ನಾನವನ್ನು ತನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಲಭಿಸುವಂತೆ ಮಾಡುವ ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತಿರುವುದಾಗಿ ಸಚಿವ ಖಾದರ್ ಅವರು ಹೇಳಿದ್ದಾರೆ.ಅಲ್ಲದೆ ಮುಂದಿನ ದಿವಸಗಳಲ್ಲಿ ಇದನ್ನು ಟೆಲಿಕಾನ್ಪರೆನ್ಸಿಗೂ ಉಪಯೋಗಿಸಲಾಗುವುದೆಂದು ಹೇಳಿದರು.
ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಾ ,ಉಪಾಧ್ಯಕ್ಷ ಸತ್ತಾರ್ , ಪಂಚಾಯತ್ ಅಭಿವೃಧ್ಧಿ ಅಧಿಕಾರಿ ನವೀನ್ ಹೆಗ್ಡೆ , ಸದಸ್ಯರಾದ ರವಿರಾಜ್ ಶೆಟ್ಟಿ ,ಕಬೀರ್ ,ಯೂಸುಫ್ ಬಾವಾ ,ಹಸೈನಾರ್ ,ಅಬ್ದುಲ್ಲಾ ,ಅಬ್ದುಲ್ ರಝಾಕ್ ,ರಝಿಯಾ , ಶಾಲಾ ಮುಖ್ಯೋಪಾಧ್ಯಾಯಿನಿ ಚಂಚಲಾಕ್ಷಿ ಯು , ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಪಿ ಎಚ್ ಮುಂತಾದವರು ಉಪಸ್ಥಿತರಿದ್ದರು.