ಮಂಗಳೂರು ಧರ್ಮಕ್ಷೇತ್ರ: ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯಲ್ಲಿ ಭರವಸೆಯ ಯಾತ್ರಿಕರ ಪಯಣ

Spread the love

ಮಂಗಳೂರು ಧರ್ಮಕ್ಷೇತ್ರ: ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯಲ್ಲಿ ಭರವಸೆಯ ಯಾತ್ರಿಕರ ಪಯಣ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಜನವರಿ ೫ರ ಭಾನುವಾರದಂದು ನಗರದ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ಚರ್ಚ್ವರೆಗೆ ನಡೆಯಿತು. ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಮೆರವಣಿಗೆಗೂ ಮುನ್ನ ಮಿಲಾಗ್ರಿಸ್ ಚರ್ಚ್ನಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆಯನ್ನು ಸಲ್ಲಿಸಿದರು. ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಈ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಯೋತಿಷ್ಯರಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸುತ್ತದೆ. ಈ ಹಬ್ಬವನ್ನು ‘ಎಪಿಫನಿ’, ‘ಥಿಯೋಫನಿ’ ಅಥವಾ ‘ತ್ರಿ ಕಿಂಗ್ಸ್ ಡೇ’ ಎಂದೂ ಕರೆಯುತ್ತಾರೆ.

ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಆವರು ತಮ್ಮ ಧರ್ಮೋಪದೇಶದಲ್ಲಿ “ಪ್ರಭು ಯೇಸು ಕ್ರಿಸ್ತರು ವಿಶ್ವದ ನಕ್ಷತ್ರ, ಅವರು ಶಾಶ್ವತ ಮೋಕ್ಷಕ್ಕೆ ನಮಗೆ ಮಾರ್ಗದರ್ಶನ ನೀಡಲು ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಮೂರು ರಾಜರ ಹಬ್ಬವು ನಮ್ಮ ಭವಿಷ್ಯವನ್ನು ಜ್ಯೋತಿಷ್ಯ ಅಥವಾ ಜಾತಕದಿಂದ ನಿಯಂತ್ರಿಸುವುದಿಲ್ಲ ಆದರೆ ಧರ್ಮಗ್ರಂಥಗಳ ಮೂಲಕ ದೈವಿಕ ಬಹಿರಂಗಪಡಿಸುವಿಕೆಯಿAದ ನಮಗೆ ನೆನಪಿಸುತ್ತದೆ. ಕ್ರಿಸ್ತನ ಅನುಯಾಯಿಗಳಾಗಿ, ನಾವು ನಮ್ಮ ಜೀವನದಲ್ಲಿ ಆತನ ಬೆಳಕನ್ನು ಪ್ರತಿಬಿಂಬಿಸಲು ಮತ್ತು ಪ್ರಪಂಚದ ನಿಜವಾದ ಬೆಳಕಾಗಿರುವ ಆತನಿಗೆ ಇತರರಿಗೆ ಮಾರ್ಗದರ್ಶನ ನೀಡಲು ಕರೆಯಲ್ಪಟ್ಟಿದ್ದೇವೆ.”, ಎಂದು ಬೋಧಿಸಿದರು.

ಪೂಜಾಂತ್ಯಕ್ಕೆ ಆರಂಭಗೊAಡ ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೊಯ್ದ ಅಲಂಕೃತ ವಾಹನವು ಮಿಲಾಗ್ರಿಸ್ ಚರ್ಚ್ನಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್ ಟವರ್ ಸರ್ಕಲ್, ಎ.ಬಿ ಶೆಟ್ಟಿ ಸರ್ಕಲ್ ಮತ್ತು ನೆಹರು ವೃತ್ತದ ಮೂಲಕ ಸಾಗಿತು.

ಮೆರವಣಿಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸAಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು.

ಬಿಷಪ್ ನೇತೃತ್ವದ ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್ ಚರ್ಚ್ ಆವರಣದÀಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.

ರೊಸಾರಿಯೋ ಕೆಥೆಡ್ರಲ್ ಚರ್ಚ್ ಮೈದಾನದಲ್ಲಿ ಪಾನಿರ್ ಚರ್ಚ್ನ ಧರ್ಮಗುರುಗಳಾದ ವಂದನೀಯ ವಿಕ್ಟರ್ ಡಿ’ಮೆಲ್ಲೋ ಅವರು ೨೦೨೫ ರ ಜುಬಿಲಿ ವರ್ಷದ ವಿಷಯ: “ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂಬುದಾಗಿ ಬೋಧಿಸಿದರು. ಪರಮ ಪ್ರಸಾದದ ಸಂಸ್ಕಾರದ ಮತ್ತು ಪವಿತ್ರ ಗ್ರಂಥಗಳ ಸಮರ್ಥನೀಯ ಶಕ್ತಿಯನ್ನು ಒತ್ತಿಹೇಳುತ್ತಾ, “ಜೀವನದ ಕಷ್ಟಗಳು, ವೈಫಲ್ಯಗಳು ಮತ್ತು ಅನಾರೋಗ್ಯದ ನಡುವೆ, ಪರಮ ಪ್ರಸಾದದ ಸಂಸ್ಕಾರ ಮತ್ತು ದೇವರ ವಾಕ್ಯದಲ್ಲಿ ಭರವಸೆಯ ಮೂಲಗಳನ್ನು ಹುಡುಕಲು ನಾವು ಕರೆಯಲ್ಪಟ್ಟಿದ್ದೇವೆ. ನಾವು ಭರವಸೆಯ ಯಾತ್ರಿಕರಾಗೋಣ. ಭರವಸೆಯನ್ನು ಎಲ್ಲೆಡೆ ಬಿತ್ತರಿಸೋಣ, ಹತಾಶೆಯಲ್ಲಿರುವವರನ್ನು ಮೇಲಕ್ಕೆತ್ತೋಣ” ಎಂದು ಬೋಧಿಸಿದರು.

ರೊಸಾರಿಯೊದಲ್ಲಿ ನಡೆದ ಆರಾಧನೆ ವಿಧಿಯನ್ನು ಮಂಗಳಜ್ಯೋತಿ ಕೇಂದ್ರದ ವಂದನೀಯ ವಿಜಯ್ ಮಚಾದೊ ಕ್ಯಾಥೊಲಿಕ್ ವಿದ್ಯಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ವಂದನೀಯ ಪ್ರವೀಣ್ ಲಿಯೋ ಲಸ್ರಾದೊರವರು ಭಕ್ತಿಯುತವಾಗಿ ನಡೆಸಿದರು.

ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮೆರವಣಿಗೆಯ ಯಶಸ್ಸಿಗೆ ಕಾರಣಾರಾದ ಎಲ್ಲರನ್ನು ಸ್ಮರಿಸಿದರು ಹಾಗೂ ಸಾಕ್ಷಿಯಾದ ಎಲ್ಲಾ ವಿಶ್ವಾಸಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


Spread the love
Subscribe
Notify of

0 Comments
Inline Feedbacks
View all comments