ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಶಾಸಕರು, ಜೆಪ್ಪು ವಾರ್ಡಿನ ರೈಲ್ವೇ ಗೇಟಿನಿಂದ ಕನಕರಬೆಟ್ಟು ರಸ್ತೆಗೆ 7 ಲಕ್ಷದ ಕಾಂಕ್ರೀಟೀಕರಣದ ಕಾಮಗಾರಿ, ಅಳಪೆ ಉತ್ತರ ವಾರ್ಡಿನಲ್ಲಿ ತೋಡು ದುರಸ್ತಿ ಕಾಮಗಾರಿಗೆ 7 ಲಕ್ಷ, ಕೊಡಿಯಾಲ್ ಬೈಲ್ ವಾರ್ಡಿನಲ್ಲಿ 7 ಲಕ್ಷ ರೂ ವೆಚ್ಚದ ತಡೆಗೋಡೆ ದುರಸ್ತಿ ಕಾಮಗಾರಿಗಳಿಗೆ ಸಾರ್ವಜನಿಕರ ಮೂಲಕ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಶೀಘ್ರವೇ ಕಾಮಗಾರಿ ನಡೆಯಲಿದ್ದು ಸಾರ್ವಜನಿಕರು ಅಭಿವೃದ್ಧಿಯ ನಿಟ್ಟಿನಲ್ಲಿ ನಮ್ಮೊಂದಿಗೆ ಸಹಕರಿಸಬೇಕು ಎಂದಿದ್ದಾರೆ.