ಮಂಗಳೂರು: ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಶವ ಪತ್ತೆ – ಕೊಲೆ ಶಂಕೆ

Spread the love

ಮಂಗಳೂರು: ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಶವ ಪತ್ತೆ – ಕೊಲೆ ಶಂಕೆ

ಮಂಗಳೂರು: ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕನ ಶವ ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತೂರು ಪದವು ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮೃತ ಆಟೋ ಚಾಲಕನನ್ನು ಮೂಲ್ಕಿ ಕೋಲ್ನಾಡು ಕೆ ಎಸ್ ರಾವ್ ನಗರ ನಿವಾಸಿ ಮಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ.

ಮಹಮ್ಮದ್ ಷರೀಫ್ ಎಂದಿನಂತೆ ಬೆಳಿಗ್ಗೆ 10:30 ಗಂಟೆಗೆ ರಿಕ್ಷಾ ಬಾಡಿಗೆಗೆ ಹೋಗುತ್ತಿದ್ದು ದಿನಾಂಕ 09-04-2025 ರಂದು 10:30 ಗಂಟೆಗೆ ಹೋಗಿದ್ದು ಮನೆಯಿಂದ ಹೋಗುವಾಗ ಆತನ KA19AE 2658 ಆಟೋರಿಕ್ಷಾ ವನ್ನು ಕೊಂಡು ಹೋಗಿದ್ದು, ಮಂಗಳೂರಿನ ಕೊಟ್ಟಾರ ಚೌಕಿ ಯಲ್ಲಿ ಪಾರ್ಕಿಂಗ್ ಇದ್ದು, ಅಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದು ,ಈತನು ಮನೆಗೆ ಬಾರದೇ ಕಾಣೆಯಾಗಿರುವುದರಿಂದ ಮೂಲ್ಕಿ ಪೊಲೀಸ್ ಠಾಣೆಯಲ್ಲಿ 32/ 2025 ಕಲಂ ಮನುಷ್ಯ ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.

ಮೂಲ್ಕಿ ಪೊಲೀಸರಿಗೆ ಮಾಹಿತಿ ಬಂದಂತೆ, ವಿನಯ್ ಚಂದ್ರನ್ ಮಂಜೇಶ್ವರ ಠಾಣೆಯ ಪೊಲೀಸ್ ರವರು ಫೋನ್ ಮಾಡಿದಂತೆ ಕಾಣೆಯಾದವರ ಆಟೋ ರಿಕ್ಷಾ ಮಂಜೇಶ್ವರ ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತೂರು ಪದವು ಎಂಬಲ್ಲಿ ದೊರೆತಿದ್ದು ಆತನ ಮೃತದೇಹವು ಅಲ್ಲಿ ಕಟ್ಟೆ ಇಲ್ಲದ ಬಾವಿಯಲ್ಲಿ ದೊರೆತಿರುತ್ತದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ FIR no. 328/25 us 194 BNSS ನಂತೆ ಪ್ರಕರಣ ದಾಖಲಾಗಿ ಪ್ರಕರಣ ತನಿಖೆಯಲ್ಲಿ ಇರುತ್ತದೆ.ಶರೀಫನು ಕೊಲೆಯಾ ಗಿರಬಹುದೆಂದು ಸಂಶಯವಿರುವುದಾಗಿ ಮೃತ ಚಾಲಕನ ಮಗ ನೌಶಾದ್ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments