ಮಂಗಳೂರು: ನೀಟ್ ಕೋಚಿಂಗ್ ಪಡೆಯುತ್ತಿದ್ದ ಯುವಕ ನಾಪತ್ತೆ
ಮಂಗಳೂರು: ನಗರದಲ್ಲಿ ನೀಟ್ ಕೋಚಿಂಗ್ ಪಡೆಯುತ್ತಿದ್ದ ಸಂಜಯ್ ಬೇರಾ (21) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಾವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21 ರಂದು ತಂದೆ ತಾಯಿಯಲ್ಲಿ ಓದಲು ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ.
ಕಾಣೆಯಾದವರ ಚಹರೆ : ಎತ್ತರ 5.8 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಕಾಣೆಯಾದ ದಿನ ಕಪ್ಪು ಜೀನ್ಸ್ ಪ್ಯಾಂಟ್, ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಬ್ಯಾಗ್ ಧರಿಸಿದ್ದರು. ಹಿಂದಿ, ಬಂಗಾಳಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಾವೂರು ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.