ಮಂಗಳೂರು : ಪಟಾಕಿ ಸ್ಟಾಲ್ ತಾತ್ಕಾಲಿಕ ಪರವಾನಿಗೆ – ಅರ್ಜಿ ಆಹ್ವಾನ
ಮಂಗಳೂರು : ದೀಪಾವಳಿ ಹಾಗೂ ಇನ್ನಿತರ ಹಬ್ಬಗಳ ಸಂಧರ್ಭದಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವ ಅರ್ಜಿದಾರರು ಐಇ-5 ರಲ್ಲಿ ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಂಇ-5 ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬೇಕಾಗಿದೆ. ಆಸಕ್ತರು ಅಕ್ಟೋಬರ್ 10 ರ ಮುಂಚಿತವಾಗಿ ಂಇ-5 ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಮತ್ತು ಕಚೇರಿಯಲ್ಲಿ ಸ್ವೀಕರಿಸಿದ ಅರ್ಜಿಯನ್ನು ಅಕ್ಟೋಬರ್ 25 ರೊಳಗೆ ನಿಗದಿತ ನಮೂನೆ ಐಇ-5 ರಲ್ಲಿ ಪರವಾನಿಗೆಯನ್ನು ಪಡೆಯಲು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಸ್ಪೋಟಕ ಕಾಯಿದೆ ಮತ್ತು ನಿಯಮ 2008 ಶೆಡ್ಯೂಲ್-Iಗಿ ರಡಿಯಲ್ಲಿ ಹಾಗೂ ಈ ಮೇಲಿನ ಆದೇಶದನ್ವಯ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮೈದಾನದಲ್ಲಿ/ ತೆರೆದ ಪ್ರದೇಶಗಳಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದ್ದು ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 10. ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ರೂ. 200 ಪಾವತಿಸಿ ಪಡೆದುಕೊಳ್ಳಬೇಕು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗಿದಿಲ್ಲ.
ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಪ್ರಸ್ತಾವಿತ ಜಮೀನಿನ ಬ್ಲೂ ಪ್ರಿಂಟ್, ಹಾಗೂ ಪಹಣಿ ಪತ್ರಗಳ ನಾಲ್ಕು ಪ್ರತಿ, ಅರ್ಜಿದಾರರ ಮೂರು ಭಾವಚಿತ್ರ ಮತ್ತು ಸರ್ಕಾರಿ ಜಮೀನು ಅಲ್ಲದೆ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರದ ನಾಲ್ಕು ಪ್ರತಿ ಹಾಗೂ ಸರ್ಕಾರಿ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಗೆ ಸಂಬಂಧಪಟ್ಟಿದೆಯೋ ಆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರದೊಂದಿಗೆ ನಿಗದಿತ ನಮೂನೆ ಂಇ-5 ಯಲ್ಲಿ ನಾಲ್ಕು ಪ್ರತಿಯಲ್ಲಿ ಸಲ್ಲಿಸಬೇಕು.
ಇಲಾಖೆಗಳಿಂದ (ಪೊಲೀಸ್, ಅಗ್ನಿಶಾಮಕ, ಸ್ಥಳೀಯ ಸಂಸ್ಥೆಗಳು ತಹಶೀಲ್ದಾರರು) ಅರ್ಜಿದಾರರು ಓಔಅ ಯನ್ನು ಪಡೆಯಬೇಕು. ವಿವಿಧ ಇಲಾಖೆಗಳಿಂದ ಅಕ್ಟೋಬರ್ 20 ರೊಳಗೆ ವರದಿ ಬಂದಲ್ಲಿ ಅಂತಹಾ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಮಂಜೂರಾದ ಪರವಾನಿಗೆಯನ್ನು ಅರ್ಜಿದಾರರು ಅಕ್ಟೋಬರ್ 25 ರೊಳಗೆ ನಿಗದಿತ ಶುಲ್ಕ ರೂ. 500/- ಪಾವತಿಸಿ ನಮೂನೆ ಐಇ-5 ರಲ್ಲಿ ಪರವಾನಿಯನ್ನು ಪಡೆಯಬೇಕು. ತಾತ್ಕಾಲಿಕ ಮಳಿಗೆಯಲ್ಲಿ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.