ಮಂಗಳೂರು ಪೋಲಿಸ್ ಆಯುಕ್ತ ಚಂದ್ರಶೇಖರ್ ವರ್ಗಾವಣೆ, ಸತೀಶ್ ಕುಮಾರ್ ನೂತನ ಆಯುಕ್ತ
ಮಂಗಳೂರು: ಮಂಗಳೂರು ಮಹಾನಗರ ನೂತನ ಪೊಲೀಸ್ ಆಯುಕ್ತರಾಗಿದ್ದ ಎಂ. ಚಂದ್ರಶೇಖರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ನೂತನ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್. ಸತೀಶ್ ಕುಮಾರ್ ಅವರನ್ನು ನಿಯೋಜಿಸಿದೆ.
ನಿರ್ಗಮನ ಆಯುಕ್ತ ಚಂದ್ರಶೇಖರ್ ಅವರನ್ನು ಬೆಂಗಳೂರಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ರಾಜ್ಯ ಸರಕಾರ ಗುರುವಾರ ಒಟ್ಟು ಹದಿನೈದು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಎಚ್ ಎಸ್ ರೇವಣ್ಣ -ಡಿಜಿಪಿ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬೆಂಗಳೂರು, ಎಸ್ ಎನ್ ಸಿದ್ದರಾಮಪ್ಪ – ಎಸ್ಪಿ ಆಂತರಿಕ ಭಧ್ರತಾ ವಿಭಾಗ, ಡಾ ಕೆ ತ್ಯಾಗರಾಜನ್ ಕೆ ಎಸ್ ಆರ್ ಪಿ ಕಮಾಂಡರ್, ಡಾ ಚೇತನ್ ಸಿಂಗ್ ರಾಥೋಡ್ ಎಸ್ಪಿ ತುಮಕೂರು, ಡಾ ರೋಹಿಣಿ ಕಟೋಚ್ ಸೆಪಟ್ – ಎಸ್ಪಿ ಚಾಮರಾಜನಗರ.
ಡಾ ದಿವ್ಯಾ ವಿ ಗೋಪಿನಾಥ್ – ಎಸ್ಪಿ ರಾಯಚೂರು, ಕುಲದೀಪ್ ಕುಮಾರ್ ಆರ್ ಜೈನ್ – ಎಸ್ಪಿ ವಿಜಯಪುರ, ಇಶಾಪಂತ್ – ನಿರ್ದೇಶಕಿ ಎಫ್ ಎಸ್ ಎಲ್ ಬೆಂಗಳೂರು, ನಿಕ್ಕಂ ಪ್ರಕಾಶ್ ಅಮ್ರಿತಿ -ಪ್ರಾಂಶುಪಾಲರು ಪೋಲಿಸ್ ತರಬೇತಿ ಶಾಲೆ ಕಲಬುರ್ಗಿ, ಜಿ ರಾಧಿಕಾ – ಎಸ್ಪಿ ಬೀದರ್, ಡಾ ಅನೂಫ್ ಎ ಶೆಟ್ಟಿ – ಎಸ್ಪಿ ಕೊಪ್ಪಳ, ಸಂಗೀತಾ ಜಿ – ಎಸ್ಪಿ ಹುಬ್ಬಳ್ಳಿ ಧಾರವಾಡ, ರೇಣುಕಾ ಕೆ ಸುಕುಮಾರ್ -ಆಯುಕ್ತೆ ಹುಬ್ಬಳ್ಳಿ ಧಾರವಾಡ ನಗರ.